ಹೆಡ್ ಬಂದರಿನಲ್ಲಿದ್ದ ಐತಿಹಾಸಿಕ ಲೈಟ್ ಹೌಸ್ ಕಟ್ಟಡ ಧ್ವಂಸ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಇಲ್ಲಿನ ಹೆಡ್ ಬಂದರಿನಲ್ಲಿ ಬ್ರಿಟಿಷ್ ಕಾಲದಿಂದ ಇದ್ದ ಐತಿಹಾಸಿಕ ಲೈಟ್ ಹೌಸ್ ಕಟ್ಟಡವನ್ನು ಕಸ್ಟಮ್ಸ್ ಇಲಾಖೆಯಿಂದ ಪರವಾನಗಿ ಪಡೆಯದೇ ಏಕಾಏಕಿ ಧ್ವಂಸ ಮಾಡಿದ ಪ್ರವಾಸೋದ್ಯಮ ಇಲಾಖೆಯ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಸ್ಟಮ್ಸ್ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ಭಾಗದ ಸುಮಾರು 3.14 ಎಕರೆ ಪ್ರದೇಶ ಕಸ್ಟಮ್ಸ್ ಇಲಾಖೆಯ ವಶದಲ್ಲಿದ್ದರಿಂದ ಈ ಲೈಟ್ ಹೌಸ್ ಕಟ್ಟಡದ ನಿರ್ವಹಣೆಯನ್ನು ಇಲಾಖೆ ಕೈಗೊಂಡಿತ್ತು. ಹಳೇ ಕಟ್ಟಡವಾಗಿದ್ದರಿಂದ ಶಿಥಿಲಾವಸ್ಥೆ ತಲುಪಿದ್ದರೂ ಇಲಾಖೆ ಆ ಕಟ್ಟಡವನ್ನು ಸ್ಮಾರಕದಂತೆ ರಕ್ಷಿಸಿಕೊಂಡು ಬಂದಿತ್ತು. ಅಲ್ಲದೇ ಈ ಕಟ್ಟಡದ ಮೇಲ್ಭಾಗದಲ್ಲಿ ನಾವಿಕರಿಗೆ ಅನುಕೂಲವಾಗಲೆಂದು ಗುರುತಿನ ಧ್ವಜವನ್ನಿಡಲಾಗಿತ್ತು. ಇಲ್ಲಿನ ಹೆಡ್ ಬಂದರಿನಲ್ಲಿ ಬ್ರಿಟಿಷ್ ಕಾಲದ ಲೈಟ್ ಹೌಸ್ ಕಟ್ಟಡ ಪರ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸುವ ಮೀನುಗಾರರಿಗೆ ಕುಮಟಾ ಬಂದರಿನ ಗುರುತಾಗಿ ಪ್ರಸಿದ್ಧಿ ಗಳಿಸಿತ್ತು. ಹೆಡ್ ಬಂದರಿನ ಗುರುತಾದ ಲೈಟ್ ಹೌಸ್ ಕಟ್ಟಡವನ್ನು ಧ್ವಂಸಗೊಳಿಸಿದ್ದರಿಂದ ಸ್ಥಳೀಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸುವ ಜೊತೆಗೆ ಕಸ್ಟಮ್ಸ್ ಅಧಿಕಾರಿಗಳಿಗೆ ದೂರಿದ್ದರು. ಅಲ್ಲದೇ ಈ ಲೈಟ್ ಹೌಸ್ ಕಟ್ಟಡವನ್ನು ಮೆಚ್ಚಿ ಅನೇಕ ಚಲನಚಿತ್ರದ ನಿರ್ಮಾಪಕರು ಇಲ್ಲಿ ಸೂಟಿಂಗ್ ಕೂಡ ನಡೆಸಿದ್ದರು. ಜಿಲ್ಲೆಯ ಜನರಷ್ಟೇ ಅಲ್ಲದೇ ಹೊರ ರಾಜ್ಯದ ಬಹುತೇಕ ಪ್ರವಾಸಿಗರು ಕುಮಟಾ ಹೆಡ್ ಬಂದರಿನಲ್ಲಿರಯವ ಬ್ರಿಟಿಷ್ ಕಾಲದ ಐತಿಹಾಸಿಕ ಲೈಟ್ ಹೌಸ್ ಕಟ್ಟಡವನ್ನು ಜಾಲತಾಣಗಳಲ್ಲಿ ಕಂಡ ಬಳಿಕ ಹೆಡ್ ಬಂದರಿಗೆ ಬಂದು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿರುವುದರಿಂದ ಇಲ್ಲಿನ ಹೆಡ್ ಬಂದರ್ ಹೆಸರು ಗಳಿಸಿದೆ.

ಈ ಕಡಲ ತೀರದ ಅಭಿವೃದ್ಧಿ ಕೈಗೊಳ್ಳುವ ಉz್ದÉೀಶದಿಂದ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಗುತ್ತಿಗೆದಾರ ಬ್ರಿಟಿಷ್ ಕಾಲದ ಐತಿಹಾಸಿಕ ಲೈಟ್ ಹೌಸ್ ಕಟ್ಟಡವನ್ನು ನೆಲಸಮಗೊಳಿಸಲು ಕಸ್ಟಮ್ಸ್ ಇಲಾಖೆಯಿಂದ ಪರವಾನಗಿ ಪಡೆಯದೆ ಏಕಾಏಕಿ ಧ್ವಂಸಗೊಳಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಕಸ್ಟಮ್ಸ್ ಇಲಾಖೆಯ ಅಧಿಕಾರಿ ಬಿ ಎನ್ ಸುಧೀಂದ್ರ ಅವರು ಕುಮಟಾ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಈ ಐತಿಹಾಸಿಕ ಲೈಟ್ ಹೌಸ್ ಕಟ್ಟಡವನ್ನು ಧ್ವಂಸಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.