ಹಿರ್ಗಾನ ಅಬಕಾರಿ ದಾಳಿ ಸತ್ಯಕ್ಕೆ ದೂರ : ಬಿಜೆಪಿ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ತನ್ನ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹಿರ್ಗಾನ ಪಂಚಾಯತ್ ಮಾಜಿ ಆದ್ಯಕ್ಷ ಮೈನಾಕರ ಶೆಟ್ಟಿ ಅವರನ್ನು ಕಳೆದ ಶನಿವಾರ ಅಬಕಾರಿ ಇಲಾಖಾಧಿಕಾರಿಗಳು ತಮ್ಮ  ಜೀಪಿನಲ್ಲಿ ಏಕಾಏಕಿ ಕರೆದೊಯ್ದು ಅಬಕಾರಿ ಕಚೇರಿಯಿಂದಲೆ ಶರಾಬು ಬಾಟಲಿ ಬಾಕ್ಸ್ ಅವರ ಮುಂದೆ ಇರಿಸಿ ಫೋಟೋ ತೆಗೆಸಿ ಅಪರಾಧಿಯನ್ನಾಗಿಸಿ ಬಿಂಬಿಸಲು ಯತ್ನಿಸಿದ್ದು ಈ ಘಟನೆ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಹೇಳಿದೆ. “ಯಾವುದೇ ಅಬಕಾರಿ ವ್ಯವಹಾರಗಳಿಲ್ಲದ ಮೈನಾಕರ ಶೆಟ್ಟಿಯವರ ಮಾನ ಹರಾಜಿಗೆ ಕೆಲ ಪ್ರಭಾವಿಗಳು ಮದ್ಯ ದಾಸ್ತಾನಿನ ಸುಳ್ಳು ಕೇಸ್ ಹಾಕಿಸಿ ಬಳಿಕ ಮಾಧ್ಯಮಗಳಲ್ಲಿ ಮಾನ ಹರಾಜು ಹಾಕುವ ಕೆಲಸ ಮಾಡಿದ್ದಾರೆ. ಅಬಕಾರಿ ಇಲಾಖಾಧಿಕಾರಿಗಳು ಸತ್ಯಾಸತ್ಯತೆ ಅರಿಯದೇ ರಾಜಕೀಯ ಒತ್ತಡಕ್ಕೆ ಮಣಿದಿದ್ದು ಇದರ ಹಿಂದೆ ಯಾರ ಕೈವಾಡ ಇದೆ?” ಎಂಬುವುದನ್ನು ಇಲಾಖೆ ಸ್ಪಷ್ಟಪಡಿಸುವಂತೆ ಬಿಜೆಪಿ ಒತ್ತಾಯಿಸಿದೆ.