`ನ್ಯಾ ಶೆಟ್ಟಿ 4.25 ಎಕರೆ ಗೋಮಾಳ ಭೂಮಿ ಅಕ್ರಮವಾಗಿ ಖರೀದಿಸಿದ್ದಾರೆ’ ಹಿರೇಮಠ್ ಹೊಸ ಆರೋಪ

ಧಾರವಾಡ : ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ವಿಶ್ವನಾಥ ಶೆಟ್ಟಿಯ ಹೆಸರನ್ನು ರಾಜ್ಯ ಸರಕಾರ ಲೋಕಾಯುಕ್ತ ಹುದ್ದೆಗೆ ಅಂತಿಮಗೊಳಿಸಿದಂದಿನಿಂದ ಇದರ ವಿರುದ್ಧ ಹೋರಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯ ಇದೀಗ ಹೊಸ ಆರೋಪವೊಂದನ್ನು ಮಾಡಿದೆ. ಜಸ್ಟಿಸ್ ಶೆಟ್ಟಿ ಅಕ್ರಮವಾಗಿ ಗೋಮಾಳ ಭೂಮಿ ಖರೀದಿಸಿದ್ದಾರೆ ಹಾಗೂ ಅಕ್ರಮ ಸಂಪತ್ತು ಹೊಂದಿದ್ದಾರೆಂದು ಸಮುದಾಯ ದೂರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ದೂರಿದ್ದಾರಲ್ಲದೆ ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದಾರೆ.
ಜಸ್ಟಿಸ್ ಶೆಟ್ಟಿ ಅವರು ಜುಡಿಶಿಯಲ್ ಲೇಔಟ್ ಸೈಟನ್ನು ನಿಯಮಾವಳಿ ಮೀರಿ ಖರೀದಿಸಿದ್ದಾರೆಂದು ಈಗಾಗಲೇ ಆರೋಪಿಸಿರುವ ಸಮುದಾಯ, ಅವರ ಪುತ್ರ ಶಶಿಕಿರಣ್ ರೇಸ್ ಕೋರ್ಸ್ ರಸ್ತೆಯಲ್ಲಿ ಹಾಗೂ ರೆಸಿಡೆನ್ಸಿ ರಸ್ತೆಯಲ್ಲಿ ಕ್ರಮವಾಗಿ ರೂ 7.5 ಕೋಟಿ ಹಾಗೂ ರೂ 5.5 ಕೋಟಿ ಮೌಲ್ಯದ ಎರಡು ಅಪಾರ್ಟಮೆಂಟ್ ಹೊಂದಿದ್ದಾರೆಂದೂ ದೂರಿದ್ದು ಈ ಬಗ್ಗೆಯೂ ತನಿಖೆಗೆ ಈಗಾಗಲೇ ಬೇಡಿಕೆಯಿರಿಸಿದ್ದಾರೆ.
ತಾವು ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರನ್ನು ಜನವರಿ 16ರಂದು ಭೇಟಿಯಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸುವುದಾಗಿ ಹಿರೇಮಠ್ ತಿಳಿಸಿದ್ದಾರೆ. “ಜಸ್ಟಿಸ್ ಶೆಟ್ಟಿ ಬೆಂಗಳೂರು ಜಿಲ್ಲೆಯ ಜಲ ಹೋಬಳಿಯಲ್ಲಿನ ಕಡಗನಹಳ್ಳಿಯಲ್ಲಿ ಸರ್ವೆ ಸಂಖ್ಯೆ 23 ಹಾಗೂ 101 ಇಲ್ಲಿನ 4.25 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಇದು ಗೋಮಾಳ ಭೂಮಿಯಾಗಿರುವುದರಿಂದ ಕಾನೂನಿನ ಪ್ರಕಾರ ಇದನ್ನು ಮಾರಾಟ ಮಾಡಲು ಯಾ ಖರೀದಿಸಲು ಸಾಧ್ಯವಿಲ್ಲ” ಎಂದು ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ದೂರಿದ್ದಾರಲ್ಲದೆ ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದಾರೆ.
ಜಸ್ಟಿಸ್ ಶೆಟ್ಟಿ ಅವರು ಜುಡಿಶಿಯಲ್ ಲೇಔಟ್ ಸೈಟನ್ನು ನಿಯಮಾವಳಿ ಮೀರಿ ಖರೀದಿಸಿದ್ದಾರೆಂದು ಈಗಾಗಲೇ ಆರೋಪಿಸಿರುವ ಸಮುದಾಯ, ಅವರ ಪುತ್ರ ಶಶಿಕಿರಣ್ ರೇಸ್ ಕೋರ್ಸ್ ರಸ್ತೆಯಲ್ಲಿ ಹಾಗೂ ರೆಸಿಡೆನ್ಸಿ ರಸ್ತೆಯಲ್ಲಿ ಕ್ರಮವಾಗಿ ರೂ 7.5 ಕೋಟಿ ಹಾಗೂ ರೂ 5.5 ಕೋಟಿ ಮೌಲ್ಯದ ಎರಡು ಅಪಾರ್ಟಮೆಂಟ್ ಹೊಂದಿದ್ದಾರೆಂದೂ ದೂರಿದ್ದು ಈ ಬಗ್ಗೆಯೂ ತನಿಖೆಗೆ ಈಗಾಗಲೇ ಬೇಡಿಕೆಯಿರಿಸಿದ್ದಾರೆ.
ತಾವು ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರನ್ನು ಜನವರಿ 16ರಂದು ಭೇಟಿಯಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸುವುದಾಗಿ ಹಿರೇಮಠ್ ತಿಳಿಸಿದ್ದಾರೆ.