ಹಳಿ ತಪ್ಪಿದ ರೈಲು : ಕನಿಷ್ಠ 36 ಸಾವು

ಭುಬನೇಶ್ವರ : ಆಂಧ್ರ  ಪ್ರದೇಶದ ವಿಝಿಯನಗರಂ ಜಿಲ್ಲೆಯ ಕುನೇರು ನಿಲ್ದಾಣದ  ಸಮೀಪ ಜಗ್ದಲಪುರ-ಭುಬನೇಶ್ವರ ಹಿರಾಖಂಡ್ ಎಕ್ಸಪ್ರೆಸ್ ರೈಲಿನ ಏಳು ಬೋಗಿಗಳು ಹಾಗೂ ಇಂಜಿನ್ ಶನಿವಾರ ರಾತ್ರಿ ಹಳಿ ತಪ್ಪಿದ ಪರಿಣಾಮ ಕನಿಷ್ಠ 36 ಪ್ರಯಾಣಿಕರು ಮೃತ ಪಟ್ಟು ಹಲವರು ಗಾಯಗೊಂಡಿದ್ದಾರೆ. ರೈಲು ಭುಬನೇಶ್ವರದತ್ತ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸುಮಾರು ರಾತ್ರಿ 11 ಗಂಟೆ ವೇಳೆ ಸಂಭವಿಸಿದೆ.