ಭಾರತೀಯರೆಲ್ಲರಿಗೂ ಹಿಂದೂತ್ವ ಬಾಗಿಲು ತೆರೆದಿದೆ : ಭಾಗ್ವತ್

ಹರಿದ್ವಾರ : ವಾಸ್ತವದಲ್ಲಿ ಎಲ್ಲ ಭಾರತೀಯರು ಹಿಂದೂಗಳಾಗಿದ್ದು, ಎಲ್ಲರಿಗೂ ಹಿಂದೂತ್ವದ ಬಾಗಿಲು ತೆರೆದುಕೊಂಡಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ಭಾಗ್ವತರ ಹುಟ್ಟುಹಬ್ಬದ ನಿಮಿತ್ತ ಯೋಗ ಗುರು ರಾಮದೇವ್ ಪತಂಜಲಿ ಯೋಗಪೀಠದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮಾತನಾಡುತ್ತಿದ್ದರು.  “ನಾವು ಜನರನ್ನು ಹಿಂದೂತ್ವಕ್ಕೆ ಮತಾಂತರ ಮಾಡುವುದಿಲ್ಲ ಮತ್ತು ನಾವು ನಮ್ಮ ಹಿರಿಯರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ನಾವು ಯಾವ ಸಮುದಾಯ ಪ್ರತಿನಿಧಿಸುತ್ತಿದ್ದೇವೆ ಎಂಬುದಕ್ಕಿಂತಲೂ ಅದು ಹಿಂದೂತ್ವ ಎಂಬುದಕ್ಕೆ ಗರ್ವವಿದೆ” ಎಂದವರು ವಿವರಿಸಿದರು.

“ವಾಸ್ತವದಲ್ಲಿ ನಾವೆಲ್ಲರೂ ಹಿಂದೂಗಳಾಗಿರುವುದರಿಂದ ಎಲ್ಲರಿಗೂ ಹಿಂದೂತ್ವದ ಬಾಗಿಲು ತೆರೆದುಕೊಂಡಿದೆ” ಎಂದರು.