ವಿಶ್ವದಲ್ಲೇ ಕನಿಷ್ಠ ಶಿಕ್ಷಣ ಪಡೆದಿರುವ ಹಿಂದೂಗಳು

ನ್ಯೂಯಾರ್ಕ್ : ಶಿಕ್ಷಣ ರಂಗದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಹೊರತಾಗಿಯೂ ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಜನರಿಗಿಂತಲೂ ಹಿಂದೂಗಳು ಕನಿಷ್ಠ ಶಿಕ್ಷಣ ಪಡೆದವರಾಗಿದ್ದಾರೆ ಎಂದು ಪಿವ್ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ತನ್ನ ಅಧ್ಯಯನಾ ವರದಿ “ರಿಲಿಜನ್ ಎಂಡ್ ಎಜುಕೇಶನ್ ಎರೌಂಡ್ ದಿ ವಲ್ರ್ಡ್ ಲಾರ್ಜ್” ಬಿಡುಗಡೆಗೊಳಿಸಿರುವ ಪಿವ್, “ಹಿಂದೂಗಳು ಇತ್ತೀಚಿಗಿನ ದಶಕಗಳಲ್ಲಿ ಶಿಕ್ಷಣದಲ್ಲಿ  ಪ್ರಗತಿ ಸಾಧಿಸಿದ್ದಾರೆ. ಉದಾ 25 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಯುವಜನತೆಯನ್ನು ಸಮೀಕ್ಷೆಯಂಗವಾಗಿ ಅಧ್ಯಯನ ನಡೆಸಿದಾಗ ಅವರು ಹಿಂದಿನ ತಲೆಮಾರಿಗಿಂತ 3.4 ವರ್ಷ ಹೆಚ್ಚು ಶಿಕ್ಷಣ ಪಡೆದಿದ್ದಾರೆ” ಎಂದು  ಹೇಳಿದೆ.

“ವಿಶ್ವದಾದ್ಯಂತ ಜನರು ಸರಾಸರಿ 5.6 ವರ್ಷ ಶಾಲೆಗೆ ಹೋಗಿದ್ದರೆ ಶೇ 41ರಷ್ಟು ಹಿಂದೂಗಳು ಯಾವುದೇ ಔಪಚಾರಿಕ ಶಿಕ್ಷಣ ಪಡೆದಿಲ್ಲ.  ಮೇಲಾಗಿ ಇತರ ಧರ್ಮಗಳಿಗೆ ಹೋಲಿಸಿದಾಗ ಹಿಂದೂ ಪುರುಷರು ಹಾಗೂ ಮಹಿಳೆಯರು ಪಡೆದಿರುವ ಶಿಕ್ಷಣದಲ್ಲಿ ಸಾಕಷ್ಟು ಅಂತರವಿದೆ” ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಬೇರೆ ಯಾವುದೇ ಧರ್ಮದ ಜನರಿಗಿಂತ ಯಹೂದಿಗಳು ಅತ್ಯಂತ ಹೆಚ್ಚು ಶಿಕ್ಷಿತರಾಗಿದ್ದಾರೆ, ಹಿಂದೂಗಳಂತೆ ಮುಸ್ಲಿಮರಲ್ಲಿ ಕೂಡ ಜನರು ಕೆಲವೇ ಕೆಲವು ವರ್ಷ ಔಪಚಾರಿಕ ಶಿಕ್ಷಣ ಪಡೆದವರಾಗಿದ್ದಾರೆ ಎಂದು ಈ 160 ಪುಟಗಳ ವರದಿ ತಿಳಿಸಿದೆ.