ಇಂದು ಮಲ್ಲಂಗೈಯಲ್ಲಿ `ಹಿಂದೂ ಯುವ ಸಂಗಮ’

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಮತೀಯ ಭಯೋತ್ಪಾದನೆ, ಮಹಿಳೆ ಮತ್ತು ಪರಿಶಿಷ್ಟರ ಮೇಲಿನ ಹೆಚ್ಚುತ್ತಿರುವ ಆಕ್ರಮಣ, ಲ್ಯಾಂಡ್ ಜಿಹಾದ್ ಸಹಿತ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಜನಜಾಗೃತಿ ಮೂಡಿಸಲು ಹಿಂದೂ ಐಕ್ಯ ವೇದಿಕೆಯ ರಾಜ್ಯಾಧ್ಯಕ್ಷೆ ಕೆ ಪಿ ಶಶಿಕಲಾ ಟೀಚರ್ ಅವರ ನೇತೃತ್ವದಲ್ಲಿ ಕಾಸರಗೋಡುವಿನಿಂದ (ಉಪ್ಪಳದಿಂದ ಆರಂಭ) ತಿರುವನಂತಪುರದವರವೆಗೆ ಮೇ 14ರಿಂದ 29ರವರೆಗೆ ನಡೆಯಲಿರುವ ಹಿಂದೂ ಹಕ್ಕು ಸಂರಕ್ಷಣಾ ಯಾತ್ರೆ ಪೂರ್ವಭಾವಿಯಾಗಿ ಮೇ 11ರಂದು ಸಂಜೆ 5 ಗಂಟೆಗೆ ಬಂದ್ಯೋಡು ಮಲ್ಲಂಗೈಯಲ್ಲಿ `ಹಿಂದೂ ಯುವ ಸಂಗಮ’ ಜರುಗಲಿದೆ.

ವಿವಿಧ ಹಿಂದೂ ಸಂಘಟನೆಗಳು, ಮಹಿಳಾ ಮಂಡಳಿಗಳು, ಸಂಘ-ಸಂಸ್ಥೆಗಳು, ಮಾತೆಯರು ಮತ್ತು ಮಹನೀಯರು, ದೇವಸ್ಥಾನಗಳ ಪದಾಧಿಕಾರಿಗಳು, ವಿವಿಧ ಸಮುದಾಯ ಸಂಘಟನೆಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.