2055 -60ರಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿದೆ

ವಾಷಿಂಗ್ಟನ್ : ವಿಶ್ವದಾದ್ಯಂತ ಇರುವ ಹಿಂದೂಗಳ ಪೈಕಿ ಶೇ 94ರಷ್ಟು ಜನ ಇರುವ ಭಾರತದಲ್ಲಿ 2055 ಮತ್ತು 2060ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಎಂದು ಇತ್ತೀಚಿನ ಫ್ಯೂ ಸಮೀಕ್ಷೆಯೊಂದು ಹೇಳಿದೆ. ಜಾಗತಿಕವಾಗಿ ಮುಂದಿನ ಎರಡು ದಶಕದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ ಜನಸಂಖ್ಯೆಯನ್ನು ಮೀರಿಸಲಿದ್ದಾರೆ. ಅಂದರೆ, 2075ರ ಹೊತ್ತಿಗೆ ಇಸ್ಲಾಂ ಜಗತ್ತಿನಲ್ಲಿ ಅತಿ ದೊಡ್ಡ ಸಮೂಹವಾಗಿ ಮೂಡಿಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.