ಬಾಬರಿ ಧ್ವಂಸ ಸಂಭ್ರಮಿಸಿ : ಹಿಂದೂ ಸಂಘಟನೆಗಳಿಂದ ವಿಶೇಷ ಪೂಜೆ

ಮಡಿಕೇರಿ : ಬಾಬರಿ ಮಸೀದಿ ಧ್ವಂಸ ಪ್ರಕರಣದ ಕರಾಳದ ದಿನವಾದ ಡಿ 6ರನ್ನು ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ದಿನವನ್ನಾಗಿ ಆಚರಿಸಿ ದೇವಳದಲ್ಲಿ ಪೂಜೆ ಪುನಸ್ಕಾರವನ್ನೂ ನಡೆಸಿದರು.

ಡಿ 6ನ್ನು ಶೌರ್ಯ ದಿನವೆಂದು ಹೇಳಿಕೊಂಡ ವಿವಿಧ ಹಿಂದೂ ಪರ ಸಂಘಟನೆಗಳು ನಗರದ ಪೇಟೆ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಮಮಂದಿರದ ಪರ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿದ ಕಾರ್ಯಕರ್ತರು, ಸಿಹಿ ಹಂಚಿದರು.

ವಿಶ್ವ ಹಿಂದೂ ಪರಿಷತ್ ಪ್ರಮುಖ ನರಸಿಂಹ ಮಾತನಾಡಿದರು. ಹಿಂದೂ ಪರಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.

ಬಾಬರಿ ಮಸೀದಿ ಧ್ವಂಸ ಘಟನೆಯ ಹಿನ್ನೆಲೆಯಲ್ಲಿ ಅದರ ಪರ ಅಥವಾ ವಿರುದ್ಧವಾದ ಯಾವುದೇ ಮೆರವಣಿಗೆಗಳಿಗೆ ಪೊಲೀಸ್ ಇಲಾಖೆ ಅನುಮತಿಯನ್ನು ನೀಡದೆ, ನಗರ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.