ಮೋದಿಗೆ ಹಿಂದೂ ಮಹಾಸಭಾ ಸವಾಲು

ಪೂಜಾ ಶಕುನ್ ಪಾಂಡೆ

ಲಕ್ನೋ : ದೇಶದಲ್ಲಿ 1,000 ಮತ್ತು 5,00ರ ನೋಟು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರ ಅವರ ಆಡಳಿತಾತ್ಮಕ ಕೌಶಲ್ಯಕ್ಕೆ ಸವಾಲು ಹಾಕುವಂತಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ (ಎವಿಎಚ್‍ಎಂ) ಹೇಳಿದೆ.

“ನೋಟು ನಿಷೇಧಕ್ಕೆ ಮುಂಚೆ ಯಾವುದೇ ಪೂರ್ವ ಸಿದ್ಧತೆ ನಡೆಸಿಲ್ಲ. ಮೋದಿಯವರು ಆಡಳಿತಾತ್ಮಕವಾಗಿ ಸಮರ್ಥರೆಂದಾದರೆ, ಅವರು ಈ ರೀತಿ ಮಾಡುತ್ತಿದ್ದರೆ ಎಂದು ಅಚ್ಚರಿಯುಂಟಾಗುತ್ತಿದೆ” ಎಂದು ಎಬಿಎಚ್‍ಎಂ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹೇಳಿದರು.

“ಯಾವುದೇ ಸಿದ್ಧತೆ ನಡೆಸಿಲ್ಲ. ನೋಟು ನಿಷೇಧ ಮಾಡಿದ ದಿನದಿಂದ, ಅಂದರೆ ನವಂಬರ್ 8ರಿಂದ ಸರ್ಕಾರವು ಪ್ರತಿದಿನವೂ ತನ್ನ ನಿರ್ಧಾರ ಬದಲಿಸುತ್ತಲೇ ಇದೆ” ಎಂದಾಕೆ ತಿಳಿಸಿದರು.

“ಮೋದಿಯವರು ನಮ್ಮ ಭಾವನೆಗಳಿಗೆ ಬೆಲೆ ನೀಡಬೇಕಾಗುತ್ತದೆ. ಯಾವಾಗಲೂ ನಮ್ಮ ಬೆಂಬಲ ಇದೆ ಎಂದು ಅವರು ತಿಳಿದುಕೊಳ್ಳಬಾರದು” ಎಂದರು.

ಕೆಲವರು ಕಪ್ಪು ಹಣ ಜಮೆ ಮಾಡಿರುವುದರಿಂದ ಜನಧನ ಯೋಜನೆಯ ಖಾತೆಯಿಂದ ಈಗ ಯಾರೂ ಹಣ ಹಿಂಪಡೆಯಬಾರದು ಎಂದಿರುವ ಮೋದಿ ನಿರ್ಧಾರ ಟೀಕಿಸಿದ ಕೇಸರಿ ನಾಯಕಿ ಪೂಜಾ, “ಇದು ಅಹಂಕಾರದ ನಿರ್ಧಾರ. ಇದು ಜನರಿಗೆ ಅಪ್ರಾಮಾಣಿಕರಾಗಲು ಅವರಿಂದ ಬೋಧನೆಯಾಗಿದೆ” ಎಂದು ಟೀಕಿಸಿದರು.