ಹಿಮೇಶ್ ದಂಪತಿ ವಿಚ್ಛೇದನಕ್ಕೆ ಅರ್ಜಿ

ಅದೇನೊ ಈ ನಡುವೆ ಚಿತ್ರರಂಗದಲ್ಲಿ ವಿಚ್ಛೇದನ ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ಅರ್ಬಾಜ್ ಖಾನ್ ಮತ್ತು ಮಲೈಕಾ ವಿಚ್ಛೇದನಕ್ಕೆ ಅರ್ಜಿ ಕೊಟ್ಟ ಬೆನ್ನಲ್ಲೇ ಮ್ಯೂಸಿಕ್ ಡೈರೆಕ್ಟರ್, ಹಾಡುಗಾರ, ಕಂಪೋಸರ್ ಕಮ್ ನಟ ಹಿಮೇಶ್ ರೇಶಮಯ್ಯ ಹಾಗೂ ಅವರ ಪತ್ನಿ ಕೋಮಲ್ ತಮ್ಮ 22 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ಬಯಸಿದ್ದಾರೆ. ಅವರು ಮೊನ್ನೆ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹಿಮೇಶ್ ದಂಪತಿಗೆ ಒಬ್ಬ ಮಗನಿದ್ದಾನೆ. ಹಿಮೇಶಗೆ ಸೋನಿಯಾ ಕಪೂರ್ ಎನ್ನುವ ಟೀವಿ ನಟಿ ಜೊತೆಗಿರುವ ಪ್ರೇಮ ಸಂಬಂಧವೇ ಅವರು ದಾಂಪತ್ಯಕ್ಕೆ ಅಂತ್ಯ ಹಾಡಲು ಕಾರಣ ಎನ್ನಲಾಗಿದೆ.