ತ್ಯಾಜ್ಯಮಯ ಗುಡ್ಡ ಬೆಂಕಿಗಾಹುತಿ

ಬೆಂಕಿ ನಿಯಂತ್ರಿಸಲು ಯತ್ನಿಸುತ್ತಿರುವ ಅಗ್ನಶಾಮಕ ಸಿಬ್ಬಂದಿ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಉಚ್ಚಿಲ ರಿಕ್ಷಾ ನಿಲ್ದಾಣ ಬಳಿಯ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸ್ಥಳೀಯರು ಹಾಗೂ ಉಡುಪಿ ಅಗ್ನಿ ಶಾಮಕದಳ ಸಿಬ್ಬಂದಿ ಸತತ ಪ್ರಯತ್ನದಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಉಚ್ಚಿಲ ರಿಕ್ಷಾ ನಿಲ್ದಾಣದ ಪ್ರದೇಶ ತ್ಯಾಜ್ಯಮಯವಾಗಿದ್ದಲ್ಲದೆ ಈ ಪ್ರದೇಶ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಇಲ್ಲಿ ಕಳೆಗಿಡಗಳು ಬೆಳೆದು ಇದೀಗ ಒಣಗಿದ್ದು, ಆಕಸ್ಮಿಕವಾಗಿ ಅದಕ್ಕೆ ಬೆಂಕಿ ಹತ್ತಿಕೊಂಡಿದ್ದು ಕೆಲ ಕ್ಷಣ ಆತಂಕ ಸೃಷ್ಟಿಸಿದೆ.

ಉಚ್ಚಿಲ ರಿಕ್ಷಾ ಚಾಲಕರು ಬೆಂಕಿ ಆರಿಸಲು ಮಾಡಿದ ಪ್ರಯತ್ನವೂ ವಿಫಲವಾಗಿದ್ದು, ನಂತರ ತುರ್ತು ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ಆರಿಸಿದ್ದಾರೆ.