ಶಿರವಸ್ತ್ರ ಧರಿಸಿದ್ದಕ್ಕೆ ಕಿರುಕುಳ, ಮುಸ್ಲಿಂ ಶಿಕ್ಷಕಿ ರಾಜೀನಾಮೆ

ಮುಂಬೈ : ಮುಸ್ಲಿಂ ಶಿರವಸ್ತ್ರ (ಹಿಜಾಬ್)  ಧರಿಸಿದ ಕಾರಣಕ್ಕಾಗಿ ಇಲ್ಲಿನ ಕುರ್ಲಾದ ಶಾಲೆಯೊಂದರ ಶಿಕ್ಷಕಿಗೆ ಕಿರುಕುಳ ನೀಡಲಾಗಿದ್ದು, ಆಕೆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಭಾರತ್ ಎಜ್ಯುಕೇಶನ್ ಸೊಸೈಟಿಯ ವಿವೇಕ್ ಇಂಗ್ಲಿಷ್ ಹೈಸ್ಕೂಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಬಿನಾ ಖಾನಳ ಧಾರ್ಮಿಕ ಡ್ರೆಸ್ ಬಗ್ಗೆ  ಶಾಲೆಯ ಮುಖ್ಯೋಪಾಧ್ಯಯರು ಅಸಹಿಷ್ಣುತೆ ಹೊಂದಿದ್ದರು.

ಆಕೆಯ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿರುವ ಶಾಲಾ ಮುಖ್ಯೋಪಾಧ್ಯಾಯ ವಿಕ್ರಂ ಪಿಳ್ಳೈ, ಶಬಿನಾರ ರಾಜೀನಾಮೆ ಪತ್ರ ಆಡಳಿತ ಮಂಡಳಿಗೆ ರವಾನಿಸಲಾಗಿದೆ ಎಂದರು.

“ಕಳೆದ ಎರಡು ವರ್ಷದಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಜೂನ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಸರಿ ಇಲ್ಲ. ಅವರಿಂದ ಶಾಲೆಯ ವಾತಾವರಣ ಕೆಟು ಹೋಗಿದೆ” ಎಂದಾಕೆ ತನ್ನ  ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ.