ಜಿಲ್ಲೆಯ ಹೆದ್ದಾರಿಗಳಲ್ಲಿ ದರೋಡೆ ಹಾವಳಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀವು ಪ್ರಯಾಣವನ್ನು ನಡೆಸಲು ಸಿದ್ಧತೆ ನಡೆಸಿದ್ದರೆ ಕೊಂಚ ಎಚ್ಚರಿಕೆಯಿಂದಿರಿ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆಕೋರರ ತಂಡ ಹೆಚ್ಚಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಹೆದ್ದಾರಿಗಳಲ್ಲಿ ಪೊಲೀಸ್ ಪೆಟ್ರೋಲಿಂಗ್ ಇರುವ ಹೊರತೂ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಪ್ರಯಾಣಿಕರನ್ನು ದೋಚುವ ತಂಡ ಸಕ್ರಿಯವಾಗಿದೆ. ಮಾರಕಾಸ್ತ್ರಗಳೊಂದಿಗೆ ಏಕಾಏಕಿ ವಾಹನಕ್ಕೆ ಅಡ್ಡವಿಟ್ಟು ಪ್ರಯಾಣಿಕರನ್ನು ದೋಚುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಚಿನ್ನಾಭರಣ, ನಗದು, ಮೊಬೈಲ್ ಸೊತ್ತುಗಳನ್ನು ಬೆದರಿಸಿ ದರೋಡೆಗೈಯ್ಯುವ ಕೃತ್ಯ ನಿರಂತರವಾಗಿದೆ.

ಎರಡು ದಿನಗಳ ಹಿಂದೆ ಲಾರಿ ಚಾಲಕನೊಬ್ಬನಿಗೆ ಹಲ್ಲೆ ನಡೆಸಿ 17,000 ರೂ ನಗದು ದರೋಡೆಗೈದ ಘಟನೆ ಶಿರಾಡಿಘಾಟನಲ್ಲಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕ ರಾಘವೇಂದ್ರ ಅವರು ಸಿಮೆಂಟ್ ಬ್ಯಾಗುಗಳನ್ನು ಗುಂಡ್ಲುಪೇಟೆಯಿಂದ ಉಡುಪಿ ಕಡೆಗೆ ತರುತ್ತಿದ್ದಾಗ ಈ ಘಟನೆ ನಡೆದಿತ್ತು. ಐವರು ಅಪರಿಚಿತರು ಈ ಕೃತ್ಯ ಎಸಗಿದ್ದರು.

ಇದೊಂದೇ ಅಲ್ಲದೆ ಇಂತಹ ಘಟನೆಗಳು ಹಲವು ಬಾರಿ ನಡೆದಿದೆ.