ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮಕ್ಕೆ ಹೈ ಆದೇಶ

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯದಲ್ಲಿ ಕಾರ್ಯನಿರತ ಎಲ್ಲ ಅನಧಿಕೃತ ಕಸಾಯಿಖಾನೆ ಮುಚ್ಚಲು ಕ್ರಮ ಜರುಗಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೋರ್ಟ್ ಆದೇಶ ಅನುಷ್ಠಾನ ಗೊಳಿಸುವಂತೆ ಪೊಲೀಸ್ ಮಹಾ-ನಿರ್ದೇಶಕ, ಪೊಲೀಸ್ ಮಹಾ-ನಿರೀಕ್ಷಕ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ವ್ಯಾಪ್ತಿ ಪ್ರಾಧಿಕಾರಕ್ಕೆ ಜಸ್ಟಿಸ್ ಅರವಿಂದ ಕುಮಾರ್ ಆದೇಶಿಸಿದ್ದಾರೆ.