ಸಂಘದ ಶಾಂತಿ ಸಭೆಗೆ ಪೆÇಲೀಸ್ ಪೌರೋಹಿತ್ಯ

ನಗರದ ಸ್ಟಾರ್ ಹೋಟೆಲಿನಲ್ಲಿ ನಡೆದ ಹಿಡನ್ ಅಜೆಂಡಾ

ಕರಾವಳಿ ಅಲೆ ಎಕ್ಸಕ್ಲೂಸಿವ್

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್ ಮುಖ್ಯಸ್ಥನ ಉಪಸ್ಥಿತಿಯಲ್ಲಿ ನಗರದ ಸ್ಟಾರ್ ಹೋಟೆಲಿನಲ್ಲಿ ನಡೆದ ಶಾಂತಿ ಸಾಮರಸ್ಯ ಸಭೆಗೆ ಮಂಗಳೂರು ನಗರ ಪೆÇಲೀಸ್ ಅಧಿಕಾರಿಗಳೇ ಪೌರೋಹಿತ್ಯ ವಹಿಸಿರುವುದು ಪೆÇಲೀಸ್ ಇಲಾಖೆ, ಅಲ್ಪಸಂಖ್ಯಾತರು ಮತ್ತು ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬಿಜೆಪಿಯ ಅಲ್ಪಸಂಖ್ಯಾತರನ್ನು ಸೆಳೆಯುವ ಸಂಘಟನೆಯ ಪ್ರಧಾನ ಮುಂದಾಳು ಇಂದ್ರೇಶ್ ಕುಮಾರ್ ಉಪಸ್ಥಿತಿಯಲ್ಲಿ ಕೆಲವು ಬಿಜೆಪಿ ಬೆಂಬಲಿಗ ಮುಸ್ಲಿಮರು ಭಾಗವಹಿಸಿದ ಸಭೆಯನ್ನು ಪೆÇಲೀಸ್ ಇಲಾಖೆಯೇ ಮುತುವರ್ಜಿ ವಹಿಸಿ ಆಯೋಜಿಸಿದಂತೆ ಕಂಡುಬಂದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರು ಇದಕ್ಕೆ ತೆರೆಮರೆಯಲ್ಲಿ ಕೈ ಜೋಡಿಸಿದಂತೆ ಕಂಡುಬಂದಿದೆ.

“ನಮ್ಮನ್ನು ನಾವು ಧರ್ಮದ ಮೂಲಕ ಗುರುತಿಸಿಕೊಳ್ಳುವುದಕ್ಕಿಂತಲೂ ತಾಯಿ ನಾಡಿನ ಭಾರತೀಯರಾಗಿ ಗುರುತಿಸಿಕೊಳ್ಳಬೇಕು” ಎಂದು ಇಂದ್ರೇಶ್ ಕುಮಾರ್ ನೀಡಿರುವ ಹೇಳಿಕೆ ಅಲ್ಲಿ ಉಪಸ್ಥಿತರಿದ್ದ ಬಹಳಷ್ಟು ಮುಸ್ಲಿಮರಿಗೆ ರುಚಿಸಲಿಲ್ಲ.

“ದೇಶದ ಧರ್ಮ ಬೇಧ ಸಮಸ್ಯೆಗೆ ಭಾರತ ಮತ್ತು ಪಾಕಿಸ್ತಾನ ಸೇರಿ ಅಖಂಡ ಭಾರತವಾಗಿ ಒಗ್ಗೂಡುವುದೇ ಪರಿಹಾರ”ವೆಂದು ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿಕೆ ನೀಡಿರುವುದು ಹಲವರಲ್ಲಿ ಗೊಂದಲ ಮೂಡಿಸಿತ್ತು.

ಇದೇ ಸೋಮವಾರ ನಗರದ ಓಷನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ರೈಟ್ಸ್ ಅವೇರ್ನೆಸ್ ಆಂಡ್ ನಾಲೆಡ್ಜ್ ಸೊಸೈಟಿ ವತಿಯಿಂದ ಈ ಕಾರ್ಯಕ್ರಮ ನಡೆಸಲಾಗಿತ್ತು.

ಕೇರಳ ಕೇಡರ್ ನಿವೃತ್ತ ಪೆÇಲೀಸ್ ಮಹಾನಿರ್ದೇಶಕ, ಕನ್ನಡಿಗ (ಡಿಜಿಪಿ) ಎಂ ಎನ್ ಕೃಷ್ಣಮೂರ್ತಿ ಈ ಕಾರ್ಯಕ್ರಮದ ಹಿಂದಿದ್ದ ಪ್ರಮುಖ ವ್ಯಕ್ತಿಯಾಗಿದ್ದ ಏಕ ಮಾತ್ರ ಕಾರಣಕ್ಕೆ ಪೆÇಲೀಸರು ಹಿಂಡು ಹಿಂಡಾಗಿ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ.


ಎಲ್ಲಿಯೂ ಕೂಡ ಸಂಘ ಪರಿವಾರದ ಭಾಗವಹಿಸುವಿಕೆಯ ಲವಲೇಶವೂ ಸುಳಿವು ನೀಡದೆ ಅಲ್ಪಸಂಖ್ಯಾತರನ್ನು ಅಪಪ್ರಚಾರದ ಖೆಡ್ಡಾಕ್ಕೆ ಕೆಡಹುವ ಯತ್ನದ ಬಗ್ಗೆ ಇಂತಹ ಮಂದಿಗೆ ಸೋಜಿಗ ಉಂಟಾಗಿದೆ.


ಸಮಾರಂಭ ನಡೆದ ಸ್ಥಳದಲ್ಲಿ ಹಿರಿಯ ಪೆÇಲೀಸ್ ಅಧಿಕಾರಿಗಳು ಇಲ್ಲದಿದ್ದರೂ ಎಸಿಪಿಯಿಂದ ಕೆಳ ಹಂತದ ಅಧಿಕಾರಿಗಳು ಇದ್ದರು. ಮಾತ್ರವಲ್ಲದೆ, ವಾಟ್ಸಪ್ ಸಾಮಾಜಿಕ ತಾಣಗಳ ಮೂಲಕ ಪೆÇಲೀಸ್ ಅಧಿಕಾರಿಗಳು ಮತ್ತು ಕೆಲವು ಪತ್ರಕರ್ತರು ಈ ಸಮಾರಂಭಕ್ಕೆ ಆಹ್ವಾನ ನೀಡಿ ಸಂದೇಶಗಳ ರವಾನೆ ಮಾಡಿದ್ದರು.

ಸಮಾರಂಭದ ನಡೆದ ನಂತರ ಕೆಲವು ಮಂದಿ ಅಲ್ಪಸಂಖ್ಯಾಕ ಸಮುದಾಯದಿಂದ ಬಂದಿರುವ ಆದರೆ, ಸಂಘ ಪರಿವಾರದ ಬಲಪಂಥೀಯ ವಿಚಾರಧಾರೆಗಳನ್ನು ಬೆಂಬಲಿಸುವ ಪತ್ರಕರ್ತರಿಗೆ ಇಂತಹ ಹಿಡನ್ ಅಜೆಂಡಾದ ಶಾಂತಿ ಸಾಮರಸ್ಯ ಸಭೆ ಬಗ್ಗೆ ಅಚ್ಚರಿ ಮೂಡಿಸಿದೆ. ಎಲ್ಲಿಯೂ ಕೂಡ ಸಂಘ ಪರಿವಾರದ ಭಾಗವಹಿಸುವಿಕೆಯ ಲವಲೇಶವೂ ಸುಳಿವು ನೀಡದೆ ಅಲ್ಪಸಂಖ್ಯಾತರನ್ನು ಅಪಪ್ರಚಾರದ ಖೆಡ್ಡಾಕ್ಕೆ ಕೆಡಹುವ ಯತ್ನದ ಬಗ್ಗೆ ಇಂತಹ ಮಂದಿಗೆ ಸೋಜಿಗೆ ಉಂಟಾಗಿದೆ.

ಇನ್ನು ಸಮಾವೇಶದಲ್ಲಿ ಭಾಗವಹಿಸಿದವರಲ್ಲಿ ದೊಡ್ಡ ಸಂಖ್ಯೆ ಕ್ರಿಶ್ಚಿಯನ್ ಸಮುದಾಯದ ಧರ್ಮಗುರುಗಳು, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಂತಿ, ಪ್ರೀತಿಯ ಹೆಸರು ಹೇಳಿ ಇವರನ್ನು ಪುಸಲಾಯಿಸಿ ಕರೆ ತರಲಾಗಿತ್ತು. ಇವರಲ್ಲಿ ಸಂಘ ಪರಿವಾರದ ವಿಚಾರಧಾರೆಗಳನ್ನು ನಿಗೂಢವಾಗಿ ಬಿತ್ತುವ ಮೂಲಕ ತಮ್ಮತ್ತ ಸೆಳೆಯುವ ಅಥವಾ ಸಾಮಾನ್ಯವಾಗಿ ಸಮಾಜದ ಅಲ್ಪಸಂಖ್ಯಾತರಲ್ಲಿ ಇರುವ ಅಭಿಪ್ರಾಯವನ್ನು ಮರೆ ಮಾಡುವ ಯತ್ನ ಇದಾಗಿದೆ ಎಂದು ಸಮಾವೇಶದ ಅನಂತರ ಕೆಥೊಲಿಕ್ ಧರ್ಮಗುರುವೊಬ್ಬರು ಸಂಶಯ ವ್ಯಕ್ತಪಡಿಸಿದರು.

“ಕೆಲವೊಂದು ಸಂದರ್ಭ ನಮ್ಮ ಅಸ್ತಿತ್ವ ಬದಲಾಗದಿದ್ದರೂ ನಿಷ್ಠೆ ಬದಲಾಯಿಸಿಕೊಳ್ಳುತ್ತೇವೆ. ನಾವು ಜಾತಿ, ಧರ್ಮ ಬದಿಗಿಟ್ಟು ದೇಶಕ್ಕೆ ನಿಷ್ಠರಾಗಿ ಬದುಕಬೇಕು” ಎಂದು ಹೇಳಿರುವುದೇ ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಸ್ಲಿಮರಲ್ಲಿ  ಕಾರ್ಯಕ್ರಮದ ಬಗ್ಗೆ ಸಂಶಯ ಮೂಡಲು ಕಾರಣವಾಯಿತು.

“ದೇಶವನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಇವೆಲ್ಲದಕ್ಕೆ ಪರಿಹಾರ ಭಾರತ ಮತ್ತು ಪಾಕಿಸ್ತಾನ ಮತ್ತೆ ಒಂದಾಗಬೇಕು. ಆ ಮೂಲಕ ಅಖಂಡ ಭಾರತ ನಿರ್ಮಾಣವಾಗಬೇಕು. ಅಖಂಡ ಭಾರತ ನಿರ್ಮಾಣವಾಗುವವರೆಗೆ ದೇಶ ಉದ್ಧಾರವಾಗದು ಎಂಬ ಶಿವಸೇನೆಯ ಉದ್ಧವ್ ಠಾಕರೆ ಮಾತು ಸರಿಯಾಗಿಯೇ ಇದೆ” ಎಂದು ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದಾಗ ತಾವು ಎಲ್ಲೊ ದಾರಿ ತಪ್ಪಿ ಬಂದಿದ್ದೇವೆ ಎಂಬುದು ಸಭಿಕರಿಗೆ ಖಚಿತವಾಗಿತ್ತು.

“ಸರ್ಕಾರಗಳ ಯಡವಟ್ಟಿನಿಂದಾಗಿ ಜಾತಿ, ಧರ್ಮಗಳ ಮಧ್ಯೆ ಅಶಾಂತಿಗೆ ಕಾರಣವಾಗುತ್ತಿದೆ. ದೆಹಲಿಯಿಂದ ಕಾನೂನು, ಕಾಯ್ದೆಗಳನ್ನು ಮಾಡುವರು ಇದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಅವರಿಗೆ ತಾನು ಯಾವ ವ್ಯಕ್ತಿಗಳ ಸಂಘಟನೆಯ ವೇದಿಕೆಯಿಂದ ಮಾತನಾಡುತ್ತಿದ್ದೇನೆ ಎಂಬ ಅರಿವು ಇದ್ದಂತಿರಲಿಲ್ಲ. ಏಕೆಂದರೆ ಅವರು ನೇರವಾಗಿ ಕೇಂದ್ರ ಸರಕಾರದ ನೀತಿಗಳ ಬಗ್ಗೆ ನೇರ ವಾಗ್ದಾಳಿ ಮಾಡಿದ್ದರು.

ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಿಲಾಗ್ರಿಸ್ ಚರ್ಚ್ ಧರ್ಮಗುರು ರೆ| ಫಾ| ವಲೇರಿಯನ್ ಡಿ’ಸೋಜಾ, ರಮೇಶ್ ಗುರೂಜಿ ಕಣ್ಣೂರು ಮತ್ತಿತರರು ಈ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು.