ಹೈಟೆನ್ಶನ್ ತಂತಿ ಕಡಿದುಬಿದ್ದು ಹಾನಿ

ಸಾಂದರ್ಭಿಕ ಚಿತ್ರ

ಮಂಗಳೂರು : ಹೈಟೆನ್ಶನ್ ತಂತಿ ಮನೆ ಮೇಲೆ ಬಿದ್ದ ಪರಿಣಾಮ ಮನೆಗೆ ಭಾರೀ ಹಾನಿ ಉಂಟಾಗಿ ಮನೆ ಮಂದಿ ಅದೃಷ್ಟವಶಾತ್ ಪಾರಾಗಿದ್ದಾನೆ. ಗಂಜಿ ಮಠ ಗ್ರಾಮ ಪಂಚಾಯತ್ ವ್ಯಾಫ್ತಿಯ ಬಡಗುಳಿಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಅಬಕಾರಿ ಇಲಾಖೆಯ ಡಿವೈಎಸ್ಪಿ ಅಮರನಾಥ ಎಸ್ ಭಂಡಾರಿ ಅವರ ನಿವಾಸದ ಗೃಹೋಪಯೋಗಿ ಸಾಮಗ್ರಿಗಳ ಸಹಿತ ಮನೆ ಕಿಟಕಿ, ಗೋಡೆಗೆ ಹಾನಿಯಾಗಿದೆ. ರಾತ್ರಿ ಶಬ್ದವನ್ನು ಕೇಳಿ ಮನೆಯವರು ಹೊರಗೋಡಿ ಬಂದಾಗ ಮನೆ ಮೀಟರ್ ಹೊತ್ತಿ ಉರಿಯುತ್ತಿತ್ತು. ಅಲ್ಲದೆ ಮನೆಯೊಳಗೂ ಬೆಂಕಿ ಕಾಣಿಸಿದೆ. ಗೃಹೋಪಯೋಗಿ ಉಪಕರಣಗಳು, ಕಿಟಕಿಗಳೂ ಹೊತ್ತಿ ಉರಿದಿದೆ. ಕೂಡಲೇ ಮೆಸ್ಕಾಂ, ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು. ಮೆಸ್ಕಾಂ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.