ಹೊಸಂಗಡಿ ಪರಿಸರದಲ್ಲಿ ತಲೆ ಎತ್ತಿದ ಹೈಟೆಕ್ ವೇಶ್ಯಾವಾಟಿಕೆ ಮಾಫಿಯಾ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಾಟ್ಸಪಿನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ ರೇಟ್ ಫಿಕ್ಸ್ ಮಾಡುವ ಹೈಟೆಕ್ ವೇಶ್ಯಾವಾಟಿಕೆ ಮಾಫಿಯಾ ಹೊಸಂಗಡಿ ಪರಿಸರದಲ್ಲಿ ತಲೆ ಎತ್ತಿದೆ.

ವೇಶ್ಯಾವಾಟಿಕೆ ಮಾಫಿಯಾಗಳ ತಮ್ಮೊಳಗೆ ಉಂಟಾದ ಕಲಹದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಬುಕ್ ಮಾಡಿದವ ಫಿಕ್ಸ್ ಮಾಡಿದ ಹಣ ನೀಡುತ್ತಿರುವಾಗ ಯುವತಿ ಹಾಗೂ ಗ್ರಾಹಕನ ಮಧ್ಯೆ ತರ್ಕ ಉಂಟಾಗಿದೆ. ಇದನ್ನರಿತು ಊರವರು ಬೆನ್ನಟ್ಟುವ ಮಧ್ಯೆ ಒಬ್ಬ ಯುವಕ ಬೈಕಿನಿಂದ ಬಿದ್ದು ಕಾಲನ್ನು ಮುರಿದುಕೊಂಡಿದ್ದಾನೆ. ವೇಶ್ಯಾವಾಟಿಕೆ ಮಾಡುವ ಯುವಕ ಹಾಗೂ ಯುವತಿಯರನ್ನು ಊರವರು ಗುರುತು ಪತ್ತೆ ಹಚ್ಚಿದರೂ ಪೆÇಲೀಸರಿಗೆ ಒಪ್ಪಿಸಲಿಲ್ಲ. ನೈತಿಕ ಪೆÇಲೀಸಗಿರಿ ನಡೆಸುವುದಾಗಿ ಪೆÇಲೀಸರು ಕೇಸು ದಾಖಲಿಸುತ್ತಿರುವುದಾಗಿ ಹೆದರಿ ಹಿಂಜರಿದಿರುವುದಾಗಿ ಊರವರು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿಯಲ್ಲಿ ಹೊಸಂಗಡಿ ಸಮೀಪದ ಪೆÇಸೋಟು ಪೆಟ್ರೋಲ್ ಪಂಪ್ ಪರಿಸರದಲ್ಲಿ ಈ ಘಟನೆ ನಡೆದಿದೆ. ಬಂದ್ಯೋಡ್, ಕೈಕಂಬ ಪರಿಸರದಲ್ಲಿ ಆಟೋ ಚಲಾಯಿಸುತ್ತಿರುವ ಯುವಕ ಯುವತಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಬಂದಿದ್ದಾನೆ. ಗೂಡಂಗಡಿ ವ್ಯಾಪಾರಿಗೆ ಹಸ್ತಾಂತರಿಸುವ ಮಧ್ಯೆ ಹಣದ ವಿಷಯದಲ್ಲಿ ತರ್ಕ ಉಂಟಾಗಿದೆ. ಮೊದಲೇ ಫಿಕ್ಸ್ ಆಗಿದ್ದ 4000 ರೂ ಗೂಡಂಗಡಿ ವ್ಯಾಪಾರಿ ರಿಕ್ಷಾ ಚಾಲಕನಿಗೆ ನೀಡುತ್ತಿರುವಾಗ ಯುವತಿ ತಡೆದು ಅದು ನನಗೆ ಅವಕಾಶವಿರುವಂತದ್ದೆಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಪತ್ನಿ ಹಾಗೂ ಮಗಳಿರುವ ಈ ವ್ಯಾಪಾರಿ ಇಂತಹ ನೀಚ ಕೆಲಸಕ್ಕಿಳಿರುವುದನ್ನು ಕಣ್ಣಾರೆ ಕಂಡ ಊರವರು ಒಮ್ಮೆಗೆ ಮೂಗಿನ ಕೈ ಮೇಲೆ ಇಟ್ಟುಕೊಂಡು ಛೀಮಾರಿ ಹಾಕಿದ್ದಾರೆ. ಕೊಚ್ಚಿ ಮಾದರಿಯಲ್ಲಿರುವ ವೇಶ್ಯಾವಾಟಿಕೆ ನಡೆಯುತ್ತಿರುವುದಾಗಿ ಊರವರು ಶಂಕೆ ವ್ಯಕ್ತಪಡಿಸಿದ್ದಾರೆ.

LEAVE A REPLY