ಗಲ್ಫ್ ಉದ್ಯೋಗಿಗಳಿಗೆ ಭಾರತ ಸರಕಾರದಿಂದ ಸಹಾಯ ಕೇಂದ್ರ

ಸಾಂದರ್ಭಿಕ ಚಿತ್ರ

  ನವದೆಹಲಿ : ಗಲ್ಫ್ ರಾಷ್ಟ್ರಗಳಲ್ಲಿ  ಉದ್ಯೋಗದಲ್ಲಿರುವ ಭಾರತೀಯ ವಲಸಿಗರನ್ನು ನಕಲಿ ಉದ್ಯೋಗ ಜಾಲಗಳಿಂದ ರಕ್ಷಿಸುವ ಉದ್ದೇಶದಿಂದ ಶರೀಯದಲ್ಲಿ  ಭಾರತೀಯ ಉದ್ಯೋಗಿಗಳ ಸಂಪನ್ಮೂಲ ಕೇಂದ್ರವೊಂದನ್ನು ತೆರೆಯಲಾಗಿದೆ. ಈ ಕೇಂದ್ರವು ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರ್ಯನಿರತವಾಗಿರುವ ಸಹಾಯವಾಣಿಯೊಂದನ್ನು ಹೊಂದಿರುವುದಲ್ಲದೆ ಸಲಹೆಗಾರರ ತಂಡವೊಂದನ್ನೂ ಹೊಂದಲಿದೆ. ಗಲ್ಫ್ ರಾಷ್ಟ್ರಗಳಾದ  ಬಹರೈನ್, ಕುವೈತ್, ಕತಾರ್, ಸೌದಿ ಅರೇಬಿಯಾ, ಓಮನ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಸುಮಾರು 60 ಲಕ್ಷ ಭಾರತೀಯ ವಲಸಿಗರು ಉದ್ಯೋಗದಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಲವಾರು ಶೋಷಣೆ, ದೌರ್ಜನ್ಯ ಹಾಗೂ ಅನ್ಯಾಯ ಪ್ರಕರಣಗಳ ಬಗ್ಗೆ ಭಾರತ ಸರಕಾರಕ್ಕೆ ದೂರುಗಳು ಬರುತ್ತಲೇ ಇವೆ.