ಮಂಗಳೂರಿನಲ್ಲಿ ರಾತ್ರಿ ಮಳೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗುರುವಾರ ತಡರಾತ್ರಿ ಮತ್ತು ಶುಕ್ರವಾರ ನಸುಕಿನ ಜಾವ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ.

ಮಂಗಳೂರಿನಲ್ಲೂ ಭಾರೀ ಮಳೆಯಾಗಿದ್ದು, ರಾತ್ರಿ ಪೂರ್ತಿ ಮಳೆ ಬರುತ್ತಲೇ ಇತ್ತು. ನಗರದ ಬಹುತೇಕ ಕಡೆಗಳಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.

ಇನ್ನು ಹಲವು ಕಡೆಗಳಲ್ಲಿ ವಿದ್ಯುತ್ ಕೂಡಾ ಕೈಕೊಟ್ಟಿದ್ದು, ರಾತ್ರಿ ಇಡೀ ಫ್ಯಾನ್ ಇಲ್ಲದೇ ಜನ ಕಂಗೆಟ್ಟಿರುವುದು ತಿಳಿದುಬಂದಿದೆ. ಇದೇವೇಳೆ ರಾತ್ರಿ ಸುರಿದ ಮಳೆಯ ತಂಗಾಳಿ ಕೊಂಚ ಹಿತಾನುಭವ ಕೂಡಾ ನೀಡಿದೆ.