ಮುಲ್ಕಿ ಸುತ್ತಮುತ್ತ ದಟ್ಟ ಮಂಜು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಹೋಬಳಿಯ ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಪಡುಪಣಂಬೂರು ಬಳಿ ಗುರುವಾರ ಬೆಳಗ್ಗೆ ಮಂಜು ಮುಸುಕಿದ ವಾತಾವರಣ ಕಂಡುಬಂದಿದ್ದು, ರಸ್ತೆಯಲ್ಲಿ ವಾಹನ ಚಲಾಯಿಸಲು ಚಾಲಕರು ಪರದಾಡಬೇಕಾಯಿತು.

ಗ್ರಾಮೀಣ ಪ್ರದೇಶಗಳಾದ ಐಕಳ, ಏಳಿಂಜೆ, ಪಂಜಿನಡ್ಕ, ಬಳಕುಂಜೆ ಪರಿಸರದಲ್ಲಿ ಮಂಜಿನಿಂದ ಭಾರೀ ಪ್ರಮಾಣದ ಇಬ್ಬನಿ ಮಳೆ ಬಂದಂತೆ ಸುರಿದಿದೆ. ಆದರೆ ಸಂಜೆಹೊತ್ತು ಮೋಡ ಮುಸುಕಿದ ವಾತಾವರಣ ಕಂಡುಬಂದಿದ್ದು, ಚಂಡಮಾರುತದ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.