ಆರೋಗ್ಯ ಸಚಿವರೇ ದಿಢೀರ್ ಭೇಟಿ ನೀಡಿ

ಕುಲಗೆಟ್ಟಿರುವ ಸರ್ಕಾರಿ ಆಸ್ಪತ್ರೆಗೆ ಎಲ್ಲ ಸೌಕರ್ಯವಿದ್ದರೂ ರೋಗಿಗಳನ್ನು ದೋಚುತ್ತಿರುವ ಆಸ್ಪತ್ರೆಗಳಿಗೆ ಆರೋಗ್ಯ ಸಚಿವರು ದೀಢಿರ್ ಭೇಟಿ ನೀಡಿದ್ರೆ ನಿಜಾಂಶ ತಿಳಿಯುತ್ತದೆ. ಸರ್ಕಾರಿ ಆಸ್ಪತ್ರೆ ಎಂದರೆ ಜನರು ಈಗ ಭಯ ಬೀಳುತ್ತಾರೆ. ಕಾರಣ ದಿನಪತ್ರಿಕೆ, ಟೀವಿಯಲ್ಲಿ ಬಂದ ಸುದ್ದಿಗಳನ್ನು ನೋಡಿ ದಂಗಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯ ಹಂಗು ಬೇಡವೇ ಬೇಡ ಎಂದು ಜನ ದೂರ ಹೋಗುತ್ತಿದ್ದಾರೆ. ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಅಲ್ಲವೇ  ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಆದಷ್ಟು ದೋಚುವುದೇ ಕೆಲಸ  ಇಲ್ಲಿ ಯಾರು ಹೇಳುವವರೂ  ಕೇಳುವವರೂ ಇಲ್ಲ  ಆದ ಕಾರಣ ಆರೋಗ್ಯ ಸಚಿವರು ಈ ಎರಡು ಆಸ್ಪತ್ರೆ ಮೇಲೆ ಹದ್ದಿನ ಕಣ್ಣಿಡಲಿ

  • ಎಸ್ ಎಂ  ಪುತ್ತೂರು