2017ರಲ್ಲಿ ತಲೆಯ ಮರುಜೋಡಣೆ ಸಾಧ್ಯ

ವೈಜ್ಞಾನಿಕ ಇತಿಹಾಸದಲ್ಲಿ ದಾಖಲೆ ಬರೆಯಲು ತನ್ನ ದೇಹಕ್ಕೆ ಬೇರೆ ತಲೆಯನ್ನು ಮರುಜೋಡಿಸಲು ಸಿದ್ಧನಾಗಿರುವ ವಲೇರಿ ವ್ಲಾಡಿಮಿರ್

ಈ ಪ್ರಯತ್ನದ ಫಲಾಫಲಗಳ ಕುರಿತು ವಿಜ್ಞಾನಿಗಳು ತಮ್ಮದೇ ಆದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ  ಆದರೂ ಕನವೆರೋ ತಮ್ಮ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದ್ದಾರೆ.
…………………..

ಮಾನವನಿಗೆ ಉತ್ತಮ ಆರೋಗ್ಯ ಸೌಕರ್ಯಗಳನ್ನು ಒದಗಿಸುವುದು, ಆರೋಗ್ಯ ವೃದ್ಧಿಸುವುದು ಮತ್ತು ಜೀವಿತಕಾಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗ ಮತ್ತು ಸಂಶೋಧನೆಯನ್ನು ನಡೆಸಿರುವ ವಿಜ್ಞಾನಿಗಳು ಮುಂಬರುವ ವರ್ಷಗಳಲ್ಲಿ ಸಾಧಿಸಬಹುದಾದ ಅಚ್ಚರಿಯ ವೈಜ್ಞಾನಿಕ ಸಾಧನೆಗಳ ಬಗ್ಗೆ ಮಿಹಿಕಾ ಬಸು ಮತ್ತು ನೀರದ್ ಮಧುರ್ ಬೆಳಕು ಚೆಲ್ಲಿದ್ದಾರೆ
ಒಬ್ಬರ ತಲೆಯನ್ನು ತೆಗೆದು ಮತ್ತೊಬ್ಬರ ದೇಹಕ್ಕೆ ಹೊಂದಿಸುವ ಸನ್ನಿವೇಶವನ್ನು ನೆನಸಿಕೊಂಡರೆ ಯಾವುದೇ ಕಾಲ್ಪನಿಕ ಸಿನಿಮಾ ನೋಡಿದಂತಾಗುತ್ತದೆ. ಆದರೆ ಜಗತ್ತಿನ ವಿಜ್ಞಾನಿಗಳು ಈ ಸಾಧನೆಯನ್ನು ಮಾಡುವತ್ತ ದಾಪುಗಾಲು ಹಾಕುತ್ತಿದ್ದಾರೆ. ಬಹುಶಃ ಮುಂದಿನ ವರ್ಷವೇ ಇದು ಸಾಧ್ಯವಾಗಬಹುದು ಎನ್ನಲಾಗುತ್ತಿದೆ. ಇಟಲಿಯ ನ್ಯೂರೋ ಸರ್ಜನ್ ಸರ್ಗಿಯೋ ಕನಾವರೋ ಈ ನಿಟ್ಟಿನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು, 2015ರಲ್ಲೇ ತಮ್ಮ ಸಂದರ್ಶನವೊಂದರಲ್ಲಿ ಇನ್ನು ಎರಡು ವರ್ಷಗಳಲ್ಲಿ ಅಂದರೆ 2017ರ ವೇಳೆಗೆ ತಾವು ಪ್ರಪ್ರಥಮ ತಲೆ ಮರುಜೋಡಣೆಯನ್ನು ಮಾಡುವುದಾಗಿ ಘೋಷಿಸಿದ್ದರು
ವೆರ್ಡಿಂಗ್ ಹಾಫ್‍ಮನ್ ರೋಗದಿಂದ ಬಳಲುತ್ತಿರುವ ರಷ್ಯಾದ ವಲೆರಿ ಸ್ಪಿರಿಡೊನೋವ್ ಬಹಳ ಹೀನಾಯ ಸ್ಥಿತಿಯಲ್ಲಿದ್ದು ತಮ್ಮ ತಲೆಯನ್ನು ಕನವೆರೋ ಅವರ ಸಂಶೋಧನೆಗಾಗಿ ಬಳಸಲು ಒಪ್ಪಿಗೆ ನೀಡಿದ್ದಾರೆ  ಕನವೆರೋ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ  ಸರ್ಜಿಕಲ್ ನ್ಯೂರಾಲಜಿ ಇಂಟರ್‍ನ್ಯಾಷನಲ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಹಲವಾರು ಲೇಖನಗಳಲ್ಲಿ ಈ ಮಾಹಿತಿ ಲಭ್ಯವಾಗಿದೆ  ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಹಲವು ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಪಾಲಿಥಿಲೀನ್ ಗ್ಲೈಕೋಲ್ ಎಂಬ ರಾಸಾಯನಿಕ ವಸ್ತುವನ್ನು ಬಳಸುವ ಮೂಲಕ ತುಂಡಾಗಿರುವ ಬೆನ್ನು ಹುರಿಯನ್ನು ಜೋಡಿಸಬಹುದು ಎಂದು ಹೇಳಿದ್ದಾರೆ
ಆರೋಗ್ಯಕರ ತಲೆಯೊಂದನ್ನು ದೇಹದಿಂದ ಬೇರ್ಪಡಿಸಿ ತಲೆ ಇಲ್ಲದ ದೇಹದೊಡನೆ ಮರುಜೋಡಣೆ ಮಾಡುವ ಪ್ರಕ್ರಿಯೆಗೆ ಸೆಫಾಲೊಸೊಮಾಟಿಕ್ ಅನಾಸ್ಟೋಮೊಸಿಸ್ (ಸಿಎಸ್‍ಎ) ಎನ್ನಲಾಗುತ್ತದೆ  ಎರಡು ಹೆಟ್ರೋಲಾಗಸ್ ಬೆನ್ನು ಹುರಿಗಳ ಉಳಿಕೆಯ ತುಂಡುಗಳನ್ನು ಜೋಡಿಸುವ ನಿಟ್ಟಿನಲ್ಲಿ ರಾಬರ್ಟ್ ವೈಟ್ ತಮ್ಮದೇ ಆದ ಸಂಶೋಧನೆ ನಡೆಸಿದ್ದಾರೆ
1970ರಲ್ಲಿ ಇಂತಹುದೇ ಸಂದರ್ಭ ಎದುರಾದಾಗ ಡಾ ವೈಟ್ ಎಂಬ ವೈದ್ಯರು ತುಂಡಾದ ಬೆನ್ನು ಹುರಿಯನ್ನು ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ರೀತಿ ಬೆನ್ನು ಹುರಿ ತುಂಡಾದ ಪ್ರಾಣಿಗಳಿಗೆ ಸಾವೇ ನಿಶ್ಚಿತ ಎಂದು ಹೇಳಲಾಗುತ್ತಿತ್ತು. ಅದರೆ ಇತ್ತೀಚೆಗೆ ಎಸ್ಟ್ರಡಾ ಮತ್ತಿತರ ಸಂಸ್ಥೆಗಳು ನಡೆಸಿದ ಸಂಶೋಧನೆಯಲ್ಲಿ ಇಲಿಗಳಿಗೆ ಮುರಿದ ಬೆನ್ನು ಹುರಿಯನ್ನು ಜೋಡಿಸುವುದರಲ್ಲಿ ಯಶಸ್ಸು ಕಾಣಲಾಗಿದೆ
ಇತ್ತೀಚೆಗೆ  ಟ್ರಿಬ್ಯೂನ್  ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ ಬೆನ್ನು ಹುರಿ ಮುರಿದು ಹೋದ ನಾಯಿಯೊಂದು ಮೂರು ವಾರಗಳ ನಂತರ ನಡೆದಾಡುತ್ತಿದ್ದುದನ್ನು ದಾಖಲಿಸಲಾಗಿದೆ. ಇದೇ ತಂತ್ರವನ್ನು ಬಳಸಿ ಮಾನವರಿಗೂ ಸಹ ಮುರಿದ ಬೆನ್ನುಹುರಿಯನ್ನು ಜೋಡಿಸಲು ಸಾಧ್ಯ ಎಂದು ಡಾ ಕನವೆರೋ ಹೇಳುತ್ತಾರೆ  ಮುಂದಿನ ವರ್ಷದಲ್ಲಿ ಇದನ್ನು ಸಾಧಿಸುವುದಾಗಿ ದೃಢನಿಶ್ಚಯದಿಂದ ಹೇಳುತ್ತಾರೆ
ಕತ್ತಿನಿಂದ ಕೆಳಭಾಗ ನಿಷ್ಕ್ರಿಯವಾಗಿರುವ ವ್ಯಕ್ತಿಯೊಬ್ಬನ ತಲೆಯನ್ನು ತೆಗೆದು ಬ್ರೈನ್ ಡೆಡ್ ಅಂದರೆ ಮೆದುಳು ನಿಷ್ಕ್ರಿಯವಾಗಿರುವ ವ್ಯಕ್ತಿಯ ದೇಹಕ್ಕೆ ಸುಲಭವಾಗಿ ಜೋಡಿಸಬಹುದು ಎಂದು ಕನವೆರೋ ಹೇಳುತ್ತಾರೆ  ಆದರೆ ನಾಯಿಗೆ ಮುರಿದ ಬೆನ್ನು ಹುರಿಯನ್ನು ಸರಿಪಡಿಸಲು ಅನುಸರಿಸಿದ ತಂತ್ರಗಳ ಬಗ್ಗೆ ಹಲವು ವಿಜ್ಞಾನಿಗಳು ತಮ್ಮ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ  ಮಾನವರಿಗೆ ತಲೆಯ ಮರುಜೋಡಣೆ ಮಾಡುವುದಕ್ಕೆ ಈ ವಿಜ್ಞಾನಿಗಳ ಪ್ರಬಂಧಗಳು ಸಮರ್ಥನೆ ಅಥವಾ ಬೆಂಬಲ ನೀಡುವುದಿಲ್ಲ  ಈ ಪ್ರಯತ್ನದ ಫಲಾಫಲಗಳನ್ನು ಕುರಿತು ವಿಜ್ಞಾನಿಗಳು ತಮ್ಮದೇ ಆದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದರೂ ಕನವೆರೋ ತಮ್ಮ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದ್ದಾರೆ