ಅಕ್ರಮ ಸಂಬಂದ ಪ್ರಶ್ನಿಸಿದ್ದಕ್ಕೆ ಚೂರಿ ತೋರಿಸಿದ ಭೂಪ !

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಠಾಣಾ ವ್ಯಪ್ತಿಯ ಹಳೆಯಂಗಡಿ ಎಂಬಲ್ಲಿ ಅಕ್ರಮ ಸಂಬಂದ ಪ್ರಶ್ನಿದ್ದಕ್ಕೆ ಸುರತ್ಕಲ್ ಕಾನ ಕಟ್ಲ ಬಳಿಯ ನಿವಾಸಿ ಗುರು ಎಂಬಾತ ಚೂರಿ ತೋರಿಸಿ ಸ್ಥಳೀಯರನ್ನು ಬೆದರಿಸಿದ್ದಾನೆ ಎಂದು ಮುಲ್ಕಿ ಪೊಲೀಸರು ತಿಳಿಸಿದ್ದಾರೆ.  ಆರೋಪಿಗೆ ದಿಗ್ಬಂದನ ವಿಧಿಸಿ ಸ್ಥಳೀಯರು ಮೂಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಳೆಯಂಗಡಿ ಇಂದಿರಾನಗರದ ಟ್ಯಾಂಕಿ ಬಳಿಯ ನಿವಾಸಿ ಮಹಿಳೆಯೊಬ್ಬರ ಮನೆಗೆ ಕಳೆದ ಕೆಲ ಸಮಯದಿಂದ  ವ್ಯಕ್ತಿಯೊಬ್ಬ ಬರುತ್ತಿದ್ದ ಎನ್ನಲಾಗಿದ್ದು ಸೋಮವಾರ ಸಂಜೆ ಆರೋಪಿ ಮಹಿಳೆಯ ಮನೆಗೆ ಬಂದಿದ್ದ. ಮನೆಯಿಂದ ವಾಪಾಸು ಹೋಗುವಾಗ ಸ್ಥಳೀಯರು ನೋಡಿ ಪ್ರಶ್ನಿಸಿದ್ದಾರೆ. ಕೂಡಲೇ ಆರೋಪಿ ಚೂರಿಯನ್ನು ಝಳಪಿಸಿ ಸ್ಥಳೀಯರನ್ನು ಭಯಭೀತರನ್ನಾಗಿಸಿದ್ದಾನೆ. ಆಗ ಸ್ಥಳೀಯರು ಒಟ್ಟು ಸೇರಿ ಆತನನ್ನು ಕೋಣೆಯೊಳಗೆ ಕೂಡಿ ಹಾಕಿ ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.