ಸೆಕ್ಸ್ ನಡೆಸಲು ಪತ್ನಿ ನಿರಾಕರಿಸಿದ ಕೋಪದಿಂದ ಶಿಶ್ನ ಕುಯ್ದುಕೊಂಡ

ಲಕ್ನೋ : ತನ್ನ ಪತ್ನಿ ಕಳೆದ ಒಂದು ದಶಕದಿಂದ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದರಿಂದ ಬೇಸತ್ತ 37 ವರ್ಷದ ವ್ಯಕ್ತಿಯೊಬ್ಬ ತನ್ನ ಶಿಶ್ನ ಕತ್ತರಿಕೊಂಡ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ವಿಚಿತ್ರವಾಗಿ ವರ್ತಿಸಿದ ಘಾಸಿರಾಂ ಎಂಬವ 18 ವರ್ಷಗಳ ಹಿಂದೆ ಮಂಜಹ್ರೀದೇವಿಯನ್ನು ವಿವಾಹವಾಗಿದ್ದ. ಆದರೆ ಕೆಲವು ವರ್ಷದಿಂದ ಆಕೆ ಸಂಭೋಗಕ್ಕೆ ನಿರಾಕರಿಸುತ್ತಿದ್ದು, ಗಂಡ ಜೀವನದಲ್ಲಿ ಜುಗುಪ್ಸೆಗೊಂಡಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ವಾರ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆತ ಮರಳಿ ಸೆಕ್ಸ್ ನಡೆಸಲು ಪ್ರಯತ್ನಿಸಿದ್ದು, ಆಕೆ ನಿರಾಕರಿಸಿದಾಗ ಜಗಳ ಮಾಡಿದ್ದಾನೆ. ನಂತರ ನಶೆಯಲ್ಲಿದ್ದ ಆತ ಚೂರಿಯಿಂದ ತನ್ನ ಶಿಶ್ನ ಕೊಯ್ದುಕೊಂಡಿದ್ದಾನೆ.

“ಕಳೆದ 10-12 ವರ್ಷದಿಂದ ಸೆಕ್ಸ್ ನಡೆಸಿಲ್ಲ. ಪತ್ನಿ ಯಾವತ್ತೂ ನನ್ನನ್ನು ಪ್ರೀತಿಯಿಂದ ನೋಡಿಲ್ಲ. ನನ್ನನ್ನು ನೋಡಿದರೆ ದೂರ ನಿಲ್ಲುತ್ತಾಳೆ” ಎಂದು ಘಾಸಿರಾಂ ಹೇಳಿದ್ದಾನೆ. ಆದರೆ ಪತ್ನಿ ಈ ಆರೋಪ ನಿರಾಕರಿಸಿದ್ದಾಳೆ.

“ಪ್ರತಿದಿನ ಕುಡಿದು ಬರುತ್ತಿದ್ದ ಆತ ಯಾವತ್ತೂ ನನ್ನ ಮಾತು ಕೇಳುತ್ತಿರಲಿಲ್ಲ. ಇದರಿಂದ ನಾನು ಕೋಪದಲ್ಲಿದ್ದೆ” ಎಂದು ಮೂವರು ಮಕ್ಕಳ ತಾಯಿ ಮಂಜ್‍ಹ್ರೀದೇವಿ ಸ್ಪಷ್ಟಪಡಿಸಿದ್ದಾಳೆ.