ಮಾಜಿ ಶಾಸಕನಿಗೆ ಎಚ್ಡೀಕೆ ಕಪಾಳಮೋಕ್ಷ

ಮಂಡ್ಯ : ಮಂಡ್ಯ ಜಿಲ್ಲೆಯ ಮಲವಳ್ಳಿ ಪಟ್ಟಣದಲ್ಲಿ  ದಲಿತ ನಾಯಕ ಹಾಗೂ ಮಾಜಿ ಜೆಡಿಎಸ್ ಶಾಸಕ  ಕೆ ಅನ್ನದನಿ ಎಂಬವರಿಗೆ  ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕಪಾಳಮೋಕ್ಷ ನಡೆಸಿರುವ  ವೀಡಿಯೋವೊಂದು ವೈರಲ್ ಆಗಿದೆಯಲ್ಲದೆ ಜೆಡಿಎಸ್ ನಾಯಕನನ್ನು ವಿವಾದದಲ್ಲೂ ಸಿಲುಕಿಸಿದೆ. ಪಟ್ಟಣದಲ್ಲಿನ ಜೆಡಿಎಸ್ ಕಚೇರಿಯನ್ನು ಕುಮಾರಸ್ವಾಮಿ ಅವರೇ ಉದ್ಘಾಟಿಸಬೇಕೆಂದು ಅನ್ನದಾನಿ

ಮತ್ತವರ ಬೆಂಬಲಿಗರು ಪಟ್ಟು ಹಿಡಿದಾಗ ಕುಮರಸ್ವಾಮಿ ತಮ್ಮ ಸಹನೆ ಕಳೆದುಕೊಂಡು ಅವರಿಗೆ ಕಪಾಳಮೋಕ್ಷಗೈದಿದ್ದಾರೆ ಎನ್ನಲಾಗಿದೆ. ಅನ್ನದನಿ ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ.

ತಮ್ಮ ವಿಶೇಷ ಪ್ರಚಾರ ಬಸ್ಸಿನಲ್ಲಿ ಆಸೀನರಾಗಿದ್ದ ಕುಮಾರಸ್ವಾಮಿ ತಮ್ಮ ಆರೋಗ್ಯದ ನೆಪವೊಡ್ಡಿ ಬಸ್ಸಿನಿಂದ ಕೆಳಗಿಳಿಯಲಿಲ್ಲವೆನ್ನಲಾಗಿದೆ. ಆರಂಭದಲ್ಲಿ ಸಿಟ್ಟಿನಿಂದ ಮಾಜಿ ಶಾಸಕನತ್ತ ಮೈಕ್ ಎಸೆದ ಜೆಡಿಎಸ್ ನಾಯಕ ನಂತರ ಅವರ ಕೆನ್ನೆಗೆ ಬಾರಿಸಿದ್ದಾರೆ.

ವೀಡಿಯೋವನ್ನು ಸ್ಥಳದಲ್ಲಿದ್ದ ಪಕ್ಷದ ಕಾರ್ಯಕರ್ತರೇ ಸೆರೆ ಹಿಡಿದಿದ್ದು ಅನ್ನದನಿಗೆ ಹೊಡೆಯುವಂತೆ ಕೆಲ ಕಾರ್ಯಕರ್ತರು ಕುಮಾರಸ್ವಾಮಿಗೆ ಹೇಳುತ್ತಿರುವುದು ಅದರಲ್ಲಿ ಕೇಳಿಸುತ್ತದೆ.

ಈ ಘಟನೆಯ ಬಗ್ಗೆ ಕುಮಾರಸ್ವಾಮಿ ಯಾ ಅನ್ನದಾನಿ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ.

 

 

LEAVE A REPLY