ಪ್ರಾಸಿಕ್ಯೂಶನ್ ವಕೀಲರ ನೇಮಕಕ್ಕೆ `ಹೈ’ ತಡೆ

ಭಾಸ್ಕರ ಶೆಟ್ಟಿ, ಬಾಳಿಗಾ

ಭಾಸ್ಕರ್ ಶೆಟ್ಟಿ, ಬಾಳಿಗಾ ಕೊಲೆ ಪ್ರಕರಣ

ಉಡುಪಿ/ಮಂಗಳೂರು : ಕರಾವಳಿ ಜಿಲ್ಲೆಯಲ್ಲಿ ಭಾರೀ ಸುದ್ದಿ ಮಾಡಿರುವ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಗಾಗಿ ವಕೀಲ ಶಾಂತಾರಾಂ ಶೆಟ್ಟಿಯವರನ್ನು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಗಾಗಿ ವಕೀಲ ರವೀಂದ್ರನಾಥ ಕಾಮರರನ್ನು ಪ್ರಾಸಿಕ್ಯೂಶನ್ ವಕೀಲರನ್ನಾಗಿ ನಿಯುಕ್ತಿಗೊಳಿಸಿರುವುದಕ್ಕೆ ರಾಜ್ಯ ಹೈಕೋರ್ಟ್ ನಿನ್ನೆ ತಡೆಯಾಜ್ಞೆ ಹೇರಿತು.

ಭಾಸ್ಕರ ಶೆಟ್ಟಿ ಪ್ರಕರಣದ ವಿಚಾರಣೆಗಾಗಿ ರಾಜ್ಯ ಸರ್ಕಾರ ಅಕ್ಟೋಬರ್ 26ರಂದು ವಕೀಲ ಶೆಟ್ಟಿಯನ್ನು ಪ್ರಾಸಿಕ್ಯೂಶನ್ ವಕೀಲರಾಗಿ ನಿಯುಕ್ತಿಗೊಳಿಸಿತ್ತು. ಬಾಳಿಗಾ ಪ್ರಕರಣದ ವಿಚಾರಣೆಗಾಗಿ ಸರ್ಕಾರ ವಕೀಲ ಕಾಮತರನ್ನು ಜ 22ರಂದು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿತ್ತು.

ಆದಾಗ್ಯೂ, ಭಾಸ್ಕರ್ ಶೆಟ್ಟಿಯ ತಾಯಿಯ ಜೊತೆಗೆ ಶಾಂತಾರಾಂ ಶೆಟ್ಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಅವರನ್ನು ಈ ಕೇಸಿನಲ್ಲಿ ಪಬ್ಲಿಕ್ ಪ್ಯಾಸಿಕ್ಯೂಟರಾಗಿ ನಿಯುಕ್ತಿಗೊಳಿಸಬಾರದೆಂದು ಆರೋಪಿ ರಾಜೇಶ್ವರಿ (ಭಾಸ್ಕರ ಶೆಟ್ಟಿಯ ಪತ್ನಿ) ರಕ್ಷಣಾ ವಕೀಲ ಆಕ್ಷೇಪ ಸಲ್ಲಿಸಿದ್ದರು.