2011ರ ಪ್ರೊಬೆಷನರಿಗಳ ನಿಯುಕ್ತಿಗೆ ಹೈಕೋರ್ಟ್ ತಡೆ

ಬೆಂಗಳೂರು : ಕರ್ನಾಟಕ ಆಡಳಿತಾತ್ಮಕ ಟ್ರಿಬ್ಯೂನಲ್ ಆದೇಶಕ್ಕೆ ತಡೆಯಾಜ್ಞೆ ಹೇರಿದ ರಾಜ್ಯ ಹೈಕೋರ್ಟ್, 2011 ಬ್ಯಾಚಿನ ಗಜೆಟೆಡ್ ಪ್ರೊಬೆಷನರಿಗಳಿಗೆ ನೇಮಕಾತಿ ಆದೇಶ ತಡೆ ಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಉದ್ಯೋಗ ಆಕಾಂಕ್ಷಿಯಾಗಿರುವ ರೇಣುಕಾಂಬಿಕೆ ಮತ್ತು ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಮತ್ತು ಜಸ್ಟಿಸ್ ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶ ಹೊರಡಿಸಿತು.