ತಂದೆ-ತಾಯಿ ಆಸ್ತಿಯಲ್ಲಿ ಪುತ್ರನಿಗೆ ಹಕ್ಕಿಲ್ಲ ಎನ್ನುವ ತೀರ್ಪಿಗೆ ಸ್ವಾಗತ

ಸಾಂದರ್ಭಿಕ ಚಿತ್ರ

ತಂದೆ-ತಾಯಿಯವರ ಆಸ್ತಿಯಲ್ಲಿ ಪುತ್ರನಿಗೆ ಹಕ್ಕು ಇಲ್ಲ ಎಂದು ಇತ್ತೀಚಗೆ ಹೈಕೋರ್ಟ್ ನೀಡಿರುವ ತೀರ್ಪು ತುಂಬಾ ಮಹತ್ವದಿಂದ ಕೂಡಿದ್ದು ಅನೇಕ ಪೋಷಕರಿಗೆ ನಿಜಕ್ಕೂ ವರದಾನವಾಗಿದೆ.

ಎಷ್ಟೋ ಜನ ಪೋಷಕರನ್ನು ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುವುದನ್ನು ತಡೆಗಟ್ಟುವಂತಹ ತೀರ್ಪು ಇದಾಗಿದೆ.  ತಂದೆ-ತಾಯಿಗಳು ಗಳಿಸಿರುವ ಆಸ್ತಿ ಮತ್ತು ಮನೆಯನ್ನು ತಮ್ಮ ವಶಕ್ಕೆ ಪಡೆದು ತಂದೆ-ತಾಯಿಯರನ್ನು ಮಕ್ಕಳು ಬೀದಿಪಾಲು ಮಾಡುವ ಎಷ್ಟೋ ಸಂಗತಿಗಳನ್ನು ತಡೆಗಟ್ಟಿ ಹಿರಿಯ ಜೀವಿಗಳಿಗೆ ಒಂದೆಡೆ ನೆಲೆಸಲು ಈ ತೀರ್ಪು ನೆರವಾಗುವಂತಿದೆ.

ಅಷ್ಟೇ ಅಲ್ಲದೆ ತಂದೆ ತಾಯಿಗಳ ನೆಮ್ಮದಿಯ ಬದುಕಿನ ಉದ್ದೇಶದಿಂದಾಗಿ ಅವರ ಒಪ್ಪಿಗೆ ಇದ್ದಲ್ಲಿ ಮಾತ್ರ ಮಕ್ಕಳು ಅವರ ಜೊತೆಯಲ್ಲಿ ವಾಸಿಸಲು ಯೋಗ್ಯರು – ಅವರು ವಿವಾಹಿತರಿರಲಿ ಅವಿವಾಹಿತರಿಲಿ – ಎಂಬ ನಿರ್ಣಯವು ಅತ್ಯಂತ ಅವಶ್ಯಕವೆನಿಸುವುದು.

ಇತ್ತೀಚೆಗೆ ಎಷ್ಟೋ ಪೋಷಕರ ಮೇಲೆ ಮಕ್ಕಳ ಕಿರುಕುಳ ಹೆಚ್ಚಾಗಿದ್ದು ಇದನ್ನು ತಡೆಯಲು ಹೈಕೋರ್ಟ್ ನಿರ್ಧಾರ ತುಂಬಾ ನೆರವಾಗಲಿದೆ. ಪೋಷಕರ ಪ್ರೀತಿ, ಮಮಕಾರದ ಮೇಲೆ ಮಕ್ಕಳು ಅವರೊಂದಿಗೆ ಇರಬೇಕೆನ್ನುವುದೂ ಕುಟುಂಬ ಪದ್ಧತಿ ಗಟ್ಟಿಗೊಳಿಸಲು ಇನ್ನಷ್ಟು ಸಹಕಾರಿ.

  • ಎಂ ಕೆ, ಮಂಗಳೂರು