ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು ಸಂತ್ರಸ್ತ ರೈತರಿಗೆ ಪರಿಹಾರ ವಿತರಿಸುವ ಕುರಿತು ಹೈಕೋರ್ಟಿನಲ್ಲಿ ನಿನ್ನೆ ವಿಚಾರಣೆ ನಡೆಯಿತು.
ಸಂತ್ರಸ್ತ ರೈತರ ಪರ ವಾದ ಆಲಿಸಿದ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಸದಸ್ಯ ಪೀಠ ಮಹತ್ವದ ಆದೇಶವನ್ನು ನೀಡಿದ್ದಾರೆ. ಒಂದು ತಿಂಗಳ ಒಳಗಾಗಿ ಮುಳುಗಡೆ ಪ್ರದೇಶದ ಸರ್ವೆ ಮಾಡಬೇಕು. ಸಂತ್ರಸ್ತ ರೈತರಿಗೆ ಪರಿಹಾರ ನೀಡಬೇಕು. ಈ ಕುರಿತಂತೆ ದ ಕ ಜಿಲ್ಲಾಧಿಕಾರಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಒಂದು ತಿಂಗಳ ಒಳಗಾಗಿ ಈ ಕುರಿತು ವರದಿ ಸಲ್ಲಿಕೆ ಮಾಡಬೇಕು. ಸರ್ವೆ ನಡೆಸಿ ಪರಿಹಾರ ವಿತರಿಸಿದ ಬಳಿಕವೇ 5 ಮೀಟರಿನಿಂದ 7 ಮೀಟರಿಗೆ ನೀರು ನಿಲುಗಡೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.