ಚಿಕ್ಕರಾಯಪ್ಪ ಬಂಧಿಸದಂತೆ ಎಸಿಬಿಗೆ ಹೈಕೋರ್ಟ್ ಆಜ್ಞೆ

ಬೆಂಗಳೂರು : ಅಕ್ರಮ ಆಸ್ತಿ ಪ್ರಕರಣದಲ್ಲಿ ಅಮಾನತುಗೊಂಡಿರುವ ಕಾವೇರಿ ನೀರಾವರಿ ನಿಗಮದ ಆಡಳಿತ ನಿರ್ದೇಶಕ ಟಿ ಎನ್ ಚಿಕ್ಕರಾಯಪ್ಪ ತಾವು ತನಿಖೆಗೆ ಸಹಕರಿಸುವುದಾಗಿ  ಹೈಕೋರ್ಟ್ ಮುಂದೆ ಹೇಳಿರುವುದರಿಂದ ಅವರನ್ನು ಬಂಧಿಸದಂತೆ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶನ ನೀಡಿದೆ.

ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿಗಳನ್ನು ಪತ್ತೆ ಹಚ್ಚುತ್ತಿದ್ದಂತೆಯೇ ಚಿಕ್ಕರಾಯಪ್ಪ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ  ಲುಕೌಟ್ ನೊಟೀಸ್ ಜಾರಿ ಮಾಡಲಾಗಿತ್ತು. ಆರೋಪಿ ಅಧಿಕಾರಿ ನಂತರ ಹೈಕೋರ್ಟಿನ ಮೊರೆ ಹೋಗಿ ತಾವು ತನಿಖೆಗೆ ಸಹಕರಿಸುವುದಾಗಿ ಹೇಳಿ ತನ್ನನ್ನು ಬಂಧಿಸದಂತೆ ಮನವಿ ಮಾಡಿದ್ದರು.