`ವಿಮಾನ ನಿಲ್ದಾಣದಲ್ಲಿ ಹೈ ಜಡ್ಜ್ ತಪಾಸಣೆ ಅವಶ್ಯ’

ಸುಪ್ರೀಂ ಅಭಿಮತ

ನವದೆಹಲಿ : ಕೇಂದ್ರ ಸರ್ಕಾರದ ನಿಯಮಗಳಂತೆ ವಿಮಾನ ನಿಲ್ದಾಣಗಳಲ್ಲಿ ಹೈಕೋರ್ಟ್ ಜಡ್ಜುಗಳ ತಪಾಸಣೆ ನಡೆಸುವುದನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಮಾನಗಳಿಗೆ ಪ್ರವೇಶ ಪಡೆಯುವಾಗ ಭದ್ರತಾ ತಪಾಸಣೆ ಮಾಡುವುದು “ಪ್ರತಿಷ್ಠೆಯ ವಿಷಯ” ಅಥವಾ “ಅಂತಸ್ತಿನ ವಿಷಯವಲ್ಲ” ಎಂದು ಕೋರ್ಟ್ ಹೇಳಿದೆ.  ವಿಮಾನ ನಿಲ್ದಾಣಗಳಲ್ಲಿ ಹೈಕೋರ್ಟ್ ಜಡ್ಜುಗಳಿಗೆ ತಪಾಸಣೆಯಿಂದ ವಿನಾಯತಿ ನೀಡಬೇಕೆಂದು ರಾಜಸ್ತಾನ ಹೈಕೋರ್ಟ್ ಆದೇಶಿಸಿದ್ದನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್ ಅವರಿದ್ದ ಮೂವರು ಸದಸ್ಯರ ನ್ಯಾಯಪೀಠ ಬದಿಗೊತ್ತಿ ಈ ತೀರ್ಪು ನೀಡಿದೆ.