ರುದ್ರೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿಸುವಂತೆ ಎನೈಎಗೆ ಹೈ ಆದೇಶ

ಬೆಂಗಳೂರು : ಕಳೆದ ವರ್ಷದ ಅಕ್ಟೋಬರ್ 16ರಂದು ನಗರದ ಕಮರ್ಷಿಯಲ್ ಸ್ಟ್ರೀಟಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ತನಿಖೆಯನ್ನು ಮೂಂದುವರಿಸುವಂತೆ ರಾಷ್ಟ್ರೀಯ ತನಿಖಾ ಏಜನ್ಸಿಗೆ  ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಆರೋಪಿಗಳು ಎನ್ನೈಎ ಕಾಯಿದೆಯ ಶೆಡ್ಯೂಲ್ಡ್

ಅಪರಾಧüಗಳ ಪಟ್ಟಿಯಲ್ಲಿರುವ ಯಾವುದೇ ಅಪರಾಧವನ್ನು ನಡೆಸಿಲ್ಲವೆಂಬ ಆಧಾರದಲ್ಲಿ ಈ ಹಿಂದೆ ಹೈಕೋರ್ಟಿನ ಏಕಸದಸ್ಯ ಪೀಠ ಎನ್ನೈಎ ತನಿಖೆಯನ್ನು ರದ್ದುಗೊಳಿಸಿತ್ತು.

ಆರೋಪಿಗಳಾದ ಮೊಹಮ್ಮದ್ ತಾಹಿರ್ ಹಾಗೂ ಆಸಿಂ ಶರೀಫ್ ನ್ಯಾಯಾಲಯದ ಮೊರೆ ಹೋಗಿ ಎನ್ನೈಎ ಕಾಯಿದೆ 2008ರÀ ಕೆಲ ಸೆಕ್ಷನ್ನುಗಳನ್ವಯ  ಈ ಪ್ರಕರಣದ ವಿಚಾರಣೆಗೆ ಆದೇಶಿಸಿ ಕೇಂದ್ರ ಸರಕಾರ ಕಾನೂನು ಮೀರಿತ್ತು ಎಂದು ಆರೋಪಿಸಿದ್ದರು. ಆದರೆ ಪ್ರಕರಣವೊಂದು ದೇಶದ ಏಕತೆಗೆ ಅಪಾಯವೊಡ್ಡುತ್ತಿದೆಯೆಂದು  ತಿಳಿದಲ್ಲಿ ಎನ್ನೈಎ ಸ್ವಯಂಪ್ರೇರಿತವಾಗಿ ತನಿಖೆ  ಕೈಗಳ್ಳಬಹುದೆಂದು ಏಜನ್ಸಿ ವಾದಿಸಿತ್ತು.