ಆಂಧ್ರ, ತೆಲಂಗಾಣದಲ್ಲಿ ಕೋಳಿ ಅಂಕ ನಿಷೇಧಿಸಿದ ಹೈಕೋರ್ಟ್

ಸಾಂದರ್ಭಿಕ ಚಿತ್ರ

ಹೈದರಾಬಾದ್ : ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕೋಳಿ ಅಂಕಕ್ಕೆ ನಿಷೇಧ ಕ್ರಮ ಎತ್ತಿ ಹಿಡಿದಿರುವ ಹೈದರಾಬಾದ್ ಹೈಕೋರ್ಟ್, ಜನವರಿಯಲ್ಲಿ ಸಂಕ್ರಾತಿ (ಪೊಂಗಲ್) ಹಬ್ಬದ ಸಂದರ್ಭದಲ್ಲಿ ಕೋಳಿ ಅಂಕ ನಡೆಯದಂತೆ ಕ್ರಮ ಜರುಗಿಸುವಂತೆ ಎರಡೂ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಸಂಕ್ರಾತಿ ಹಬ್ಬದಂದು ಮಾತ್ರ ಕೋಳಿ ಅಂಕಕ್ಕೆ ನಿಷೇಧವಲ್ಲ ಎಂದಿರುವ ಕೋರ್ಟ್, ವರ್ಷಪೂರ್ತಿ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಸಂಕ್ರಾತಿಯಂದು ಇಲ್ಲಿನ ಭಾರೀ ಸಂಖ್ಯೆ ಮಂದಿ ಮನೋರಂಜನೆ ಎಂದು ಹೇಳಿಕೊಂಡು ಕೋಳಿ ಅಂಕದಲ್ಲಿ ಪಾಲ್ಗೊಳ್ಳುತ್ತಾರೆ.

ತಮಿಳುನಾಡಿನಲ್ಲಿ ಎತ್ತುಗಳಿಗೆ ಹಿಂಸೆ ನೀಡುವಂತಹ ಮನೋರಂಜನಾ ಕ್ರೀಡೆ `ಜಲ್ಲಿಕಟ್ಟು’ವಿಗೆ ನಿಷೇಧ ಹೇರಲಾದ ಹಿನ್ನೆಲೆಯಲ್ಲೇ ಇಲ್ಲಿ ಕೋಳಿ ಅಂಕಕ್ಕೆ ನಿಷೇಧ ಹೇರಲಾಗಿದೆ.