ರಾಘವೇಶ್ವರ ಪಿಐಎಲ್ ವಿಚಾರಣೆ `ಒಲ್ಲೆ’ ಎಂದ ಹಂಗಾಮಿ ಚೀಫ್ ಜಸ್ಟಿಸ್

  ಬೆಂಗಳೂರು :Àುಚಂದ್ರಾಪುರ ಮಠದ  ರಾಘವೇಶ್ವರ ಸ್ವಾಮಿ ವಿರುದ್ಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲಿನ ವಿಚಾರಣೆ ನಡೆಸುವುದರಿಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್ ಜಿ ರಮೇಶ್ ಹಿಂದೆ ಸರಿದಿದ್ದಾರೆ. ಸ್ವಾಮಿ ಪರ ವಾದಿಸುತ್ತಿರುವ ಬಿ ವಿ ಆಚಾರ್ಯ ತಮ್ಮ ಹಿರಿಯ ವಕೀಲರಾಗಿದ್ದಾರಲ್ಲದೆ ಅವರ ಅಧೀನದಲ್ಲಿ ತಾವು ಪ್ರಾಕ್ಟೀಸ್ ಮಾಡಿದ್ದಾಗಿ ಜಸ್ಟಿಸ್ ರಮೇಶ್ ಹೇಳಿದ್ದಾರೆ.
ರಾಜ್ಯ ವಿಧಾನಸಭೆ ಸೂಕ್ತ ಕಾನೂನು ಜಾರಿಗೊಳಿಸುವ ಮೂಲಕ ರಾಮಚಂದ್ರಾಪುರ ಮಠ ಮತ್ತಿತರ ಮಠಗಳನ್ನು ನಿಯಂತ್ರಿಸಬೇಕು ಎಂದು ಎದುರ್ಕಳ ಈಶ್ವರ ಭಟ್ ಮತ್ತಿತರರು ಪಿಐಎಲ್ ದಾಖಲಿಸಿದ್ದರು. ಹೊಸನಗರ ಸ್ವಾಮಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ ಹಾಗೂ ಧರ್ಮಗ್ರಂಥಗಳಲ್ಲಿನ ಎಲ್ಲಾ ನಿಬಂಧನೆಗಳನ್ನು ಮೀರಿದ್ದಾರೆಂದೂ ಅರ್ಜಿದಾರರು ಆರೋಪಿಸಿದ್ದರಲ್ಲದೆ ಮಠದ ಉತ್ತರಾಧಿಕಾರಿಯ ಹೆಸರನ್ನು ಸೂಚಿಸಲು ಹಾಗೂ ಆಡಳಿತ ನಿರ್ವಹಿಸಲು ಸಮಿತಿಯೊಂದನ್ನು ನೇಮಿಸುವಂತೆಯೂ ಮನವಿ ಮಾಡಿದ್ದಾರೆ.