ಮೀನು ಸಂಸ್ಕರಣಾ ಘಟಕಗಳ ಮೇಲಿನ ದಾಳಿ ಸಂದರ್ಭ ಹವಾಲ ಜಾಲ ಪತ್ತೆ

ಮಂಗಳೂರು :  ಮಂಗಳೂರು ಹಾಗೂ ಉಡುಪಿಯಲ್ಲಿ ಮೂರು ಪ್ರಮುಖ ಮೀನು ಸಂಸ್ಕರಣಾ ಘಟಕಗಳಿಗೆ  ನಡೆಸಲಾದ ದಾಳಿಗಳ ಸಂದರ್ಭ  ಹವಾಲ ಜಾಲವೊಂದನ್ನು ಪತ್ತೆ ಹಚ್ಚಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿ ಸಂದರ್ಭ ಅಧಿಕಾರಿಗಳು ರೂ 195 ಕೋಟಿ ಅಘೋಷಿತ ಆದಾಯ ಪತ್ತೆ ಹಚ್ಚಿದ್ದು ರೂ 88 ಲಕ್ಷ ನಗದು ಹಣವನ್ನೂ ವಶಪಡಿಸಿಕೊಂಡಿದ್ದಾರೆ. ತೆರಿಗೆ ವಂಚನೆ ನಡೆಸಲಾಗುತ್ತಿದೆ ಎಂಬ ಸಂಶಯದ ಮೇಲೆ ಈ ಘಟಕಗಳ ಮೇಲೆ ಕರ್ನಾಟಕ ಹಾಗೂ ಗೋವಾ ಪ್ರಾಂತ್ಯದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

LEAVE A REPLY