ನಾಗರಿಕ ಎಂಬ ಪದ ಅಪಾರ್ಥ ಮಾಡಿಕೊಂಡಿದ್ದೇವೆಯೇ

ನಾಗರಿಕ ಎಂಬ ಪದವನ್ನು ತಪ್ಪಾಗಿ ಬಳಸುತ್ತಿರುವುದನ್ನು ನಾವು ಎಷ್ಟೋ ಕಡೆ ನೋಡಬಹುದಾಗಿದೆ. ಬಸ್ಸಗಳಲ್ಲಿ `ಹಿರಿಯ ನಾಗರಿಕ’ ಅಂತ ಬರೆದು ಒಂದು ಸೀಟನ್ನು ಕಾದಿರಿಸಲಾಗುತ್ತದೆ. ಕೆಲವು ಸಂಘ ಸಂಸ್ಥೆಗಳು ಕೂಡಾ `ನಾಗರಿಕ’ ಎಂಬ ಹೆಸರನ್ನು ಹೊಂದಿರುತ್ತದೆ ಮತ್ತು ವಿಶೇಷವಾಗಿ ಒಂದು ಊರಲ್ಲಿ ಅಥವಾ ಒಂದು ಜಾಗದಲ್ಲಿ ಯಾವುದೇ ಒಂದು ಸಮಾರಂಭವನ್ನು ಆಯೋಜಿಸಿದಲ್ಲಿ ಅದರ ಆಯೋಜಕರು ತಮ್ಮನ್ನು ಆ ಜಾಗದ ನಾಗರಿಕರೆಂದು ಹೇಳಿಕೊಳ್ಳುವುದನ್ನು ನಾವು ನೋಡುತ್ತೇವೆ. ಇದರ ಅರ್ಥ ಅಲ್ಲಿ ನಾಗರಿಕರಲ್ಲದವರು ಅಂದರೆ ಅನಾಗರಿಕರೂ ಇದ್ದಾರೆ ಎಂದಲ್ಲವೇ ? ಇಲ್ಲಿ ಈ ನಾಗರಿಕ ಪದದ ಬದಲು ಊರಿನ ಹತ್ತು ಸಮಸ್ತರೆಂದಾಗಲೀ ಅಥವಾ ಊರಿನ ನಿವಾಸಿಗಳೆಂದಾಗಲೀ ಬರೆಯುವುದು ಸೂಕ್ತ ಅಲ್ಲವೇ ? ಹಿರಿಯ ನಾಗರಿಕರು ಎಂದು ಬರೆಯುವ ಬದಲು ಹಿರಿಯ ವ್ಯಕ್ತಿಗಳೆಂದು ಬರೆದರೆ ಚೆನ್ನ ಅಲ್ಲವೇ
ಈ ನಾಗರಿಕ ಪದದ ನಿಜವಾದ ಅರ್ಥವಾದರೂ ಏನು  ಸುಮಾರು ಐದಾರು ಸಾವಿರ ವರ್ಷಗಳಷ್ಟು ಹಿಂದೆ ನಾಗರಿಕತೆ ಶುರುವಾಯಿತು ಎಂದು ಹೇಳುತ್ತಾರೆ. ಇದರ ಅರ್ಥವೇನು  ಇದರ ಅರ್ಥ ಅದಕ್ಕೆ ಮುಂಚೆ ನಾಗರಿಕರೂ ಇಲ್ಲವೆಂದು ತಾನೆ
ಮುಂಚೆ ಅಂದರೆ ಸುಮಾರು ಐದಾರು ಸಾವಿರ ವರ್ಷಗಳಷ್ಟು ಹಿಂದೆ ಜನರು ಬರೇ ಒಂದು ಕುಟುಂಬಕ್ಕೆ ಸೇರಿದವರು ಮಾತ್ರ ಒಂದು ಜಾಗದಲ್ಲಿ ಒಟ್ಟಾಗಿ ಜೀವಿಸುತ್ತಿದ್ದರು. ಕ್ರಮೇಣ ಬೇರೆ ಬೇರೆ ಕುಟುಂಬಕ್ಕೆ ಸೇರಿದ ಜನರು ಸೇರಿ ಒಟ್ಟಾಗಿ ಜೀವಿಸುವ ಅನಿವಾರ್ಯತೆ ಎದುರಾದಾಗ ಅದಕ್ಕೆ ಪೂರಕವಾದ ಹಾಗೂ ಅನುಕೂಲಕರವಾದ ವಾತಾವರಣ ಸೃಷ್ಟಿ ಮಾಡಲಾಯಿತು. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಅನ್ಯಾಯವಾಗದಂತೆ ಕೆಲವು ನೀತಿ ನಿಯಮಗಳನ್ನು ಮಾಡಿ ಎಲ್ಲರೂ ಅದನ್ನು ಪಾಲಿಸುವಂತೆ ಮಾಡಲಾಯಿತು. ಈ ರೀತಿ ಆಡಳಿತ ಮಾಡುವುದನ್ನು ನಗರೀಕರಣ ಎನ್ನಲಾಯಿತು. ಇಲ್ಲಿ ವಾಸಿಸುವವರನ್ನು ನಾಗರಿಕರು ಎಂದು ಕರೆಯಲಾಯಿತು. ಈಗ ಎಲ್ಲರೂ ನಾಗರಿಕರೇ ಆದುದರಿಂದ ಈ ಪದ ಉಪಯೋಗಿಸುವುದು ಸರಿಯಲ್ಲ ಎಂದು ನನ್ನ ಅನಿಸಿಕೆ. ಒಂದು ಶಿಸ್ತುಬದ್ಧ ಮತ್ತು ಕ್ರಮಬದ್ಧವಾದ ಜೀವನ ಸಾಗಿಸುವವರನ್ನು ಸಿವಿಲಿಯನ್ಸ್ ಅಂತ ಕರೆಯುವುದು  ನಾಗರಿಕರು ಅಂತ ಹೇಳುವುದು ಕೂಡಾ ಅಷ್ಟೊಂದು ಸೂಕ್ತ ಅಲ್ಲ

  • ತುಕರಾಮ ಕೊಂಚಾಡಿ  ಪೆರ್ಲಗುರಿ ಮಂಗಳೂರು