ಹಿರಿಯರ ಕುರಿತ ಕಾಳಜಿ ಮಾತಿನಲ್ಲಿ ಇದ್ದರೆ ಸಾಲದು

ಇತ್ತೀಚೆಗೆ ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲು ಕೂದಲೆಳೆ ಅಂತರದಲ್ಲಿ ತಪ್ಪಿದಾಗ ಅನಿವಾರ್ಯವಾಗಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಬೇಕಾಯಿತು ಕೆಎಸ್ಸಾರ್ಟಿಸಿ ಮಾಮೂಲು ಬಸ್ಸಿನಲ್ಲಿ ಟಿಕೆಟ್ ಸಿಗದೆ ಐರಾವತ ಬಸ್ಸಿನಲ್ಲಿ ಟಿಕೆಟ್ ಪಡೆದುಕೊಂಡೆ ಆದರೆ ಈ ಬಸ್ಸಿನಲ್ಲಿ ಹಿರಿಯರಿಗೆ ಯಾವುದೇ ರಿಯಾಯ್ತಿ ಇಲ್ಲ ಎನ್ನುವುದು ಟಿಕೆಟ್ ತೆಗೆದಾಗಲೇ ಗೊತ್ತಾಯಿತು ಹಿರಿಯ ನಾಗರಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಹೊಂದಿದ್ದರೂ ಪ್ರಯಾಣಕ್ಕೆ ಅಗತ್ ಇದ್ದ ರಿಯಾಯ್ತಿ ಐರಾವತ ಬಸ್ಸಿನವರು ಕೊಡದಿರುವುದು ಸರಿಯಲ್ಲ ಹಿರಿಯರ ಕುರಿತಾದ ಕಾಳಜಿ ಬರೀ ಮಾತಿನಲ್ಲಿ ಇದ್ದರೆ ಸಾಲದು ಕೃತಿಯಲ್ಲೂ ವ್ಯಕ್ತವಾದರೆ ಉತ್ತಮ

  • ಕೆ ಚಂದ್ರಶೇಖರ ಶೆಟ್ಟಿ  ಮಂಗಳೂರು

LEAVE A REPLY