ಗುಂಡ್ಯದಲ್ಲಿ ಹಾಸನದ ವ್ಯಕ್ತಿ ನಿಗೂಢ ನಾಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಗುಂಡ್ಯ ಎಂಬಲ್ಲಿ ಟ್ರಾಕ್ಟರ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಮೂಲದ ಶೇಖರ್ ( 55) ಎಂಬವರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದ ಆರ್ ಎಸ್ ದುದ್ದಾ ಎಂಬಲ್ಲಿನ ನಿವಾಸಿಯಾಗಿರುವ ಶೇಖರ್, ಎಸೈ ಪಿ ಎಲ್ ಸಂಸ್ಥೆಯ ಟ್ರಾಕ್ಟರಿನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು, ಕಳೆದ ನವೆಂಬರ್ 17ರಿಂದ ಗುಂಡ್ಯದಿಂದ ನಿಗೂಢವಾಗಿ ಕಾಣೆಯಾಗಿದ್ದಾರೆ ಎಂದು ಅವರ ಮಗ ಅನಿಲ್ ಕುಮಾರ್ ಉಪ್ಪಿನಂಗಡಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.