ಕೇಂದ್ರ ಗುರಿ ತಲುಪುವ ಧಾವಂತದಲ್ಲಿ ದಾರಿ ತಪ್ಪಿತೇ

ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವ ಮೋದಿಯವರು ಪರಿಸ್ಥಿತಿ ಸುಧಾರಿಸಲು ನೀಡಿದ 50 ದಿನಗಳ ಅವಧಿ ಕಳೆದಿದ್ದರೂ ಈ ಬಗ್ಗೆ ಉಂಟಾಗಿರುವ ಗೊಂದಲಗಳೊಂದಿಗೆ ಆತಂಕವೂ ದಿನೇ ದಿನೇ ಹೆಚ್ಚಾಗುತ್ತಿದೆ  ಹಾಗೆಯೇ ವಿತ್ತ ಸಚಿವಾಲಯ ದಿನಕ್ಕೊಂದು ಕಾನೂನನ್ನು ಹೊರಡಿಸುತ್ತಾ ಇರುವುದನ್ನು ನೋಡಿದರೆ ಸರಕಾರ ಈ ಬಗೆಗೆ ಅಂದುಕೊಂಡಿದ್ದನ್ನು ಸಾಧಿಸುವ ಗುರಿ ತಲುಪುವ ವಿಚಾರದಲ್ಲಿ ದಾರಿ ತಪ್ಪೀತೇ ಅಥವಾ ಯಡವಟ್ಟು ಮಾಡಿಕೊಂಡೀತೇ ಎಂಬುದನ್ನು ಕೇಳಬೇಕಾಗಿದೆ
ವಿರೋಧ ಪಕ್ಷಗಳು ಆರೋಪಿಸುತ್ತಿರುವಂತೆಯೇ ಇದುವರೆಗೆ ಹಣದ ವಿಚಾರವಾಗಿ ಸರತಿ ಸಾಲಿನಲ್ಲಿ ಈ ದೇಶದ ಯಾವ ಕಾಳಧನಿಕರೂ ನಿಂತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯೇ  ಹಾಗೆಯೇ ಪ್ರಭಾವಿ ವ್ಯಕ್ತಿಗಳ ಮನೆಯಲ್ಲಿ ಎರಡು ಸಾವಿರ ರೂಪಾಯಿಗಳ ಹೊಟ ನೋಟುಗಳ ಬಂಡಲ್ ಹೇಗೆ ಸಿಕ್ಕಿದವು  ನಗದುರಹಿತ ವಹಿವಾಟಿಗೆ ಕೇಂದ್ರ ಪ್ರಚಾರ ನೀಡುತ್ತಿರುವುದು ಯಾರನ್ನು ಮಂಗ ಮಾಡಲು

  • ವೇದಾನಂದ ಕೆ ಪುತ್ತೂರು