ಕಾಸರಗೋಡು ಹರತಾಳ ಪೂರ್ಣ : ಮಂಜೇಶ್ವರದಲ್ಲಿ ಮಿಶ್ರ ಪ್ರತಿಕ್ರಿಯೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಜಿಷ್ಣು ಪ್ರಣೋಯ್  ಕುಟುಂಬಸ್ಥರ ಮೇಲೆ ನಡೆದ ಪೆÇೀಲಿಸ್ ದೌರ್ಜನ್ಯವನ್ನು ವಿರೋಧಿಸಿ ಯುಡಿಎಫ್ ಹಾಗೂ ಬಿಜೆಪಿ ಗುರುವಾರ ಕರೆ ನೀಡಿದ ಹರತಾಳ ಜಿಲ್ಲೆಯಲ್ಲಿ ಪೂರ್ಣಗೊಂಡಿದೆಯಾದರೂ, ಮಂಜೇಶ್ವರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹುತೇಕ ಶಾಂತಿಯುತವಾಗಿ ನಡೆದ ಹರತಾಳದಲ್ಲಿ ಕೆಲವೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದ ಯುಡಿಎಫ್ ಕಾರ್ಯಕರ್ತರ ಮೇಲೆ ಪೆÇೀಲಿಸರು ಲಾಠಿಚಾರ್ಜ್ ನಡೆಸಿದ್ದಾರೆ.

ಬಹುತೇಕ ಅಂಗಡಿ ಮುಗ್ಗಟ್ಟುಗಳು ಗುರುವಾರದಂದು ಬಾಗಿಲು ತೆರೆಯಲಿಲ್ಲ, ಸರಕಾರಿ ಹಾಗೂ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ನಿಲುಗಡೆಗೊಂಡಿದ್ದು, ಸರಕಾರಿ ಕಚೇರಿಗಳಲ್ಲಿ ನೌಕರರ ಉಪಸ್ಥಿತಿ ಬಹಳ ಕಡಿಮೆಯಾಗಿತ್ತು.

ಎಂಡೋ ವೈದ್ಯಕೀಯ ಶಿಬಿರ ನಡೆಯುತ್ತಿರುವ ಕಳ್ಳಾರ್, ಪನತ್ತಡಿ ಗ್ರಾ ಪಂ ಹಾಗೂ ಕಳಿಯಾಟ ಉತ್ಸವ ನಡೆಯುವ ಕುಂಬಳೆ ಗ್ರಾ ಪಂ.ಗಳಲ್ಲಿ ಹರತಾಳಕ್ಕೆ ವಿನಾಯಿತಿ ಕೊಡಲಾಗಿತ್ತು.  ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದ ಹರತಾಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಅಗತ್ಯವಾದ ಹಾಲು, ಅಂಬುಲೆನ್ಸ್ ಸೇವೆಗೆ ಹರತಾಳದ ಬಿಸಿ ತಟ್ಟಲಿಲ್ಲ. ಮಂಜೇಶ್ವರದಲ್ಲಿ ಅಂಗಡಿಮಗ್ಗಟ್ಟುಗಳು ತೆರೆದಿತ್ತು. ಸರಕಾರಿ ಬಸ್ಸುಗಳು ಸ್ಥಗಿತಗೊಂಡಿದ್ದರೂ ಕೆಲವೊಂದು ಖಾಸಗಿ ಬಸ್ಸುಗಳು ಸಂಚಾರ ನಡೆಸುತಿತ್ತು.

ಉದುಮ ಮಾಂಗಾಡ್ ಎಂಬಲ್ಲಿ ರಸ್ತೆಯ ಮೇಲೆ ಕಲ್ಲಿರಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರಿಗೆ ಪೆÇೀಲಿಸರು ಲಾಠಿರುಚಿ ತೋರಿಸಿದರು. ಗುರುವಾರ 11 ಗಂಟೆಗೆ ಹರತಾಳ ನಡೆಸಿದ 20 ಮಂದಿಯ ತಂಡ ವಾಹನ ಸಂಚಾರ ತಡೆದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪೆÇೀಲಿಸ್ ಆಗಮನವನ್ನು ತಿಳಿದ ಕೆಲ ಮಂದಿ ಓಡಿ ಪಲಾಯನಗೈದಿದ್ದಾರೆ.

ಹರತಾಳದ ವೇಳೆ ಕಾಞಂಗಾಡ್ ಸಿವಿಲ್ ಸ್ಟೇಶನ್ ಪರಿಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರಕಾರಿ ಉದ್ಯೋಗಸ್ಥರ ವಿರುದ್ದ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಯುಡಿಎಫ್ ಕಾರ್ಯಕರ್ತರನ್ನು ಪೆÇೀಲಿಸರು ಬಂಧಿಸಿದ್ದಾರೆ. ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಿವಿಲ್ ಸ್ಟೇಶನ್ ಬಳಿಯ ಕಚೇರಿಗೆ ತೆರಳಿದರು. ನಂತರ ಹರತಾಳದ ದಿನದಂದು ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕಾಞಂಗಾಡು ಪೆÇೀಲಿಸರು ಯುಡಿಎಫ್ ನಾಯಕರಾದ ಎಂ ಪಿ ಜಾಫರ್, ಟಿ ಎಖಾಲಿದ್, ಕುಞಕೃಷ್ಣನ್, ಮೋಹನನ್ ಸೇರಿದಂತೆ ಹಲವರನ್ನು ಬಂಧಿಸಿದರು.