ಬಾಬರಿ ಮಸೀದಿ ಧ್ವಂಸ ದಿನಾಚರಣೆ

ಹಾನಿಗೀಡಾದ ಬಸ್ಸುಗಳು

ಕುಂಜತ್ತೂರು, ಉದ್ಯಾವರ, ಉಪ್ಪಳದಲ್ಲಿ

ಅಘೋಷಿತ ಹರತಾಳ : ಬಸ್ಸಿಗೆ ಕಲ್ಲು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನವಾದ ಡಿಸೆಂಬರ್ 6 ಮಂಗಳವಾರದಂದು ಕಾಸರಗೋಡು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಅಂಗಡಿಗಳು ಮುಚ್ಚಿಕೊಂಡು ಅಘೋಷಿತ ಹರತಾಳ ಕಂಡುಬಂತು.

ಕುಂಜತ್ತೂರು, ಉದ್ಯಾವರ, ಉಪ್ಪಳ ಮೊದಲಾದೆಡೆ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಅದೇ ರೀತಿ ಕಡಂಬಾರ್, ಬೇಕರಿ ಜಂಕ್ಷನ್, ದುರ್ಗಿಪಳ್ಳ, ಕಡಂಬಾರ್ ಕಟ್ಟೆ ಮೊದಲಾದೆಡೆ ರಸ್ತೆಗಳಲ್ಲಿ ಟೈಯರ್ ಉರಿಸಿ ವಾಹನ ಸಂಚಾರವನ್ನು ಆತಂಕಿತಗೊಳಿಸುವ ಯತ್ನ ನಡೆದಿದೆ. ಬಳಿಕ ಪೆÇಲೀಸರು ತಲುಪಿ ಬೆಂಕಿಯನ್ನು ನಂದಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅದೇ ರೀತಿ ಸೋಮವಾರ ರಾತ್ರಿ ಖಾಸಗಿ ಹಾಗೂ ಸರಕಾರಿ ಬಸ್ಸುಗಳಿಗೆ ಕಲ್ಲೆಸೆತ ನಡೆದಿದೆ. ಕಲ್ಲೆಸೆತದಿಂದ ಬಸ್ಸುಗಳ ಗಾಜುಗಳು ಹಾನಿಗೀಡಾಗಿವೆ.

ಹಾನಿಗೀಡಾದ ಬಸ್ಸುಗಳು
ಹಾನಿಗೀಡಾದ ಬಸ್ಸುಗಳು

ಪೈವಳಿಕೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿವೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಇಬ್ಬರು ಯುವಕರು ಬೈಕಲ್ಲಿ ಬಂದು ಬಸ್ಸಿಗೆ ಕಲ್ಲೆಸೆದು ಪರಾರಿಯಾಗಿರುವುದಾಗಿ ಹೇಳಲಾಗಿದೆ. ಸೋಮವಾರ ಮದ್ಯಾಹ್ನ ಪೆÇಸೋಟಿನಲ್ಲಿ ಕರ್ನಾಟಕ ಸಾರಿಗೆ ಬಸ್ಸಿನ ಮುಂಬಾಗದ ಗಾಜಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಆದರೆ ಪ್ರಯಾಣಿಕರಿಗಾಗಲೀ ಬಸ್ ಸಿಬ್ಬಂದಿಗಳಿಗಾಗಲೀ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಬಾಬರಿ ಮಸೀದಿ ಧ್ವಂಸಗೊಂಡು ಹಲವಾರು ವರ್ಷಗಳೇ ಸಂದರೂ ಕಾಸರಗೋಡು ಜಿಲ್ಲೆಯಲ್ಲಿ ಪ್ರತಿವರ್ಷ ಡಿಸೆಂಬರ್ 6ರಂದು ದಿಢೀರ್ ಆಗಿ ಅಘೋಷಿತ ಹರತಾಳ ನಡೆಯುತ್ತಲೇ ಇದೆ. ಸೋಮವಾರ ರಾತ್ರಿಯಿಂದಲೇ ಕಾಸರಗೋಡು ಜಿಲ್ಲೆಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.