ಅಭಿನವ್ ಬಿಂದ್ರಾ ಆಗಿ ಹರ್ಷವರ್ಧನ್

ಕ್ರೀಡಾ ಆಧರಿತ ಚಿತ್ರಗಳ ಸಾಲಿಗೆ ಇನ್ನೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. 2008ರ ಬೀಜಿಂಗ್ ಒಲಂಪಿಕ್ಕಿನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಜೀವನಾಧರಿತ ಸಿನಿಮಾ ಬೆಳ್ಳಿತೆರೆಯ ಮೇಲೆ ಮೂಡಿ ಬರುತ್ತಿದೆ. ಅಭಿನವ್ ಬಿಂದ್ರಾ  ಪಾತ್ರದಲ್ಲಿ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್ ನಟಿಸಲಿದ್ದಾನೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ `ಮಿರ್ಜಿಯ’ ಚಿತ್ರದ ಮೂಲಕ ಬಾಲಿವುಡ್ಡಿಗೆ ಎಂಟ್ರಿ ನೀಡಿದ್ದ ಹರ್ಷವರ್ಧನ್, ಈಗ ಅಭಿನವ್ ಬಿಂದ್ರಾ ಬಯೋಪಿಕ್‍ಗೆ ರೆಡಿಯಾಗುತ್ತಿದ್ದಾನೆ. ಸದ್ಯ, ಪ್ರಿ-ಪೆÇ್ರಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾ ಶುರು ಮಾಡಲಿದೆ. ಸ್ವತಃ ಅನಿಲ್ ಕಪೂರ್ ಈ ಸಿನಿಮಾ ನಿರ್ಮಿಸುವ ಯೋಚನೆಯಲ್ಲಿದ್ದಾರೆ.