ರಿಷಬ್ ನಾಯಕಿಯಾಗಿ ಹರಿಪ್ರಿಯಾ

`ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಈಗ `ಬೆಲ್ ಬಾಟಂ’ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು ಆ ಚಿತ್ರದಲ್ಲಿ ಹರಿಪ್ರಿಯಾ ಆತನ ನಾಯಕಿಯಾಗಿದ್ದಾಳೆ. ಈ ಸಿನಿಮಾಗೆ `ಒಲವೇ ಮಂದಾರ’, `ಬುಲೆಟ್ ಬಸ್ಯಾ’ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಜಯತೀರ್ಥ ಆಕ್ಷನ್ ಕಟ್ ಹೇಳಲಿದ್ದು ಚಿತ್ರದ ಮುಹೂರ್ತ ಕೆಲವು ದಿನಗಳ ಹಿಂದಷ್ಟೇ ನಡೆದಿದೆ.

`ಬೆಲ್ ಬಾಟಂ’ ಪತ್ತೆದಾರಿ ಕಥೆ ಹೊಂದಿದ ಸಿನಿಮಾವಾಗಿದ್ದು ಇದರಲ್ಲಿ ಕಾಮಿಡಿ, ರೊಮ್ಯಾನ್ಸ್ ಕೂಡಾ ಇರಲಿದೆಯಂತೆ.

ಚಿತ್ರದ ಬಹುತೇಕ ಶೂಟಿಂಗ್ ಬನವಾಸಿ, ಶಿವಮೊಗ್ಗ, ಜೋಗ, ಉಡುಪಿ ಸುತ್ತಮುತ್ತ ನಡೆಸಲು ಚಿತ್ರರಂಗ ಸ್ಕೆಚ್ ಹಾಕಿಕೊಂಡಿದೆ. ಚಿತ್ರದಲ್ಲಿ ಶಿವಮಣಿ ಹಾಗೂ ಪ್ರಮೋದ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಬಹುತೇಕ ರಂಗಭೂಮಿ ಪ್ರತಿಭೆಗಳೂ ನಟಿಸಲಿದ್ದಾರೆ.

 

LEAVE A REPLY