ಹಾರ್ದಿಕ್ `ಸೆಕ್ಸ್ ವೀಡಿಯೋ’ ಬಹಿರಂಗ

ತನ್ನ ವಿರುದ್ಧದ ಸಂಚು ಇದೆಂದ ಪಟಿದಾರ್ ನಾಯಕ

ಅಹ್ಮದಾಬಾದ್ : ಗುಜರಾತ್ ರಾಜ್ಯದ ಪಟಿದಾರ್ ಚಳುವಳಿ ನಾಯಕ 24 ವರ್ಷದ ಹಾರ್ದಿಕ್ ಪಟೇಲ್ ಅವರದ್ದೆಂದು ಹೇಳಲಾದ ಸೆಕ್ಸ್ ವೀಡಿಯೋವೊಂದು ಸೋಮವಾರ ನಗರದ ಹಲವಾರು ಗುಜರಾತ್ ಟಿವಿ ಚಾನೆಲ್ಲುಗಳಲ್ಲಿ ಪ್ರಸಾರಗೊಂಡಿದೆ. ಇದು ತನ್ನ ಗೌರವಕ್ಕೆ ಧಕ್ಕೆ ತರುವ ಸಂಚು ಎಂದು ಹಾರ್ದಿಕ್ ಹೇಳಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ

ಇದ್ದರೂ ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ರಾಜ್ಯದಲ್ಲಿ ಈ ವೀಡಿಯೋ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಆಸ್ಪದ ನೀಡಿದೆ.

ವೀಡಿಯೋದಲ್ಲಿ ಹರ್ದಿಕ್ ಪಟೇಲ್ ಅವರಂತೆಯೇ ಕಾಣುವಂಹ ವ್ಯಕ್ತಿಯೊಬ್ಬ ಅಪರಿಚಿತ ಯುವತಿಯೊಬ್ಬಳೊಂದಿಗೆ ಕಾಣಿಸಿಕೊಂಡಿದ್ದಾನೆ. ಯುವತಿ ಕ್ಯಾಮರಾಗೆ ಬೆನ್ನು ಹಾಕಿ ಕುಳಿತಿರುವಂತೆಯೇ ಕೊಠಡಿಯಲ್ಲಿ ಕತ್ತಲು ಆವರಿಸುವುದು ವೀಡಿಯೋದಲ್ಲಿ ಕಾಣಿಸುತ್ತದೆ.

“ಇಂತಹ ಆರೋಪಗಳು ನನ್ನ ವಿರುದ್ಧ ಬರುತ್ತವೆ ಎಂಬ ಬಗ್ಗೆ ನಾನು ಹೇಳುತ್ತಾ ಬಂದಿದ್ದೇನೆ. ಇದಕ್ಕೆಲ್ಲಾ ನಾನು ತಲೆ ಕೆಡಿಸುವುದಿಲ್ಲ, ಬಿಜೆಪಿಯ ವಿರುದ್ಧದ ನನ್ನ ಹೋರಾಟ ಮುಂದುವರಿಸುತ್ತೇನೆ” ಎಂದು ಪಟೇಲ್ ಹೇಳಿದ್ದಾರೆ.