ಹಾಸ್ಟೆಲಿನಲ್ಲಿ ಸಲಿಂಗರತಿ : ವಿಕೃತ ವಾರ್ಡನ್ ಸೆರೆ

ಕಾಸರಗೋಡು : ಹಾಸ್ಟೆಲಿನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಸಲಿಂಗ ಕಿರುಕುಳ ನೀಡುತ್ತಿದ್ದ ವಿಕೃತಕಾಮಿ ವಾರ್ಡನನ್ನು ವಿದ್ಯಾನಗರ ಪೆÇಲೀಸರು ಬಂಧಿಸಿದ್ದಾರೆ. ಅಡೂರು ನಿವಾಸಿ ಮಹಮ್ಮದಲಿ (48) ಬಂಧಿತ ಆರೋಪಿ. ಈತ ಬದಿಯಡ್ಕ ಠಾಣಾ ವ್ಯಾಪ್ತಿಯ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳನ್ನು ಬೆದರಿಸಿ ಕಿರುಕುಳ ನೀಡುತ್ತಿದ್ದ. ಈತ ಈಗಾಗಲೇ ನಾಲ್ಕು ಮಕ್ಕಳಿಗೆ ಕಿರುಕುಳ ನೀಡಿರುವುದು ಖಚಿತಗೊಂಡಿದೆ. ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ದೂರಿನಂತೆ ಪೆÇಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.