ಬ್ಯಾಂಕ್ ಸಿಬ್ಬಂದಿ ಲಾರೆನ್ಸ್ ಅನುಚಿತವಾಗಿ ವರ್ತಿಸಿ ತೊಂದರೆ ನೀಡುತ್ತಿರುವ ಕುರಿತು

ಸಾಂದರ್ಭಿಕ ಚಿತ್ರ

ದಿನಾಂಕ 8-12-2016ರಂದು ಸಂಜೆ 3:15ಕ್ಕೆ ಮೂಡಬಿದ್ರೆಯ ಕಾರ್ಪೊರೇಶನ್ ಬ್ಯಾಂಕಿಗೆ ಬಂದು ಚಲನ್ ಬರೆದು ಲೈನಿಗೆ ನಿಂತಾಗ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕ್ಯಾಷ್ ಕೌಂಟರನ್ನು ಬಂದ್ ಮಾಡಿ ನನ್ನ ಅಕೌಂಟಿಗೆ ದುಡ್ಡು ಜಮೆ ಮಾಡಲು ನಿರಾಕರಿಸಿ ಚಲನನ್ನು ಕಿತ್ತೊಗೆದು ನನಗೆ ಅವಮಾನಿಸಿರುತ್ತಾರೆ. ಬ್ಯಾಂಕ್ ವ್ಯವಹಾರದ ಸಮಯ 3:30 ಆಗಿದ್ದರೂ ಅದಕ್ಕೂ ಮೊದಲೇ ಬ್ಯಾಂಕಿನಲ್ಲಿ ಇದ್ದ ನನಗೆ ಕ್ಯಾಷ್ ಕೌಂಟರ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಾರೆನ್ಸ್ ಎಂಬುವವರು ಸೇವೆ ನೀಡಲು ನಿರಾಕರಿಸಿ ಕ್ಯಾಷ್ ಕೌಂಟರಿನ ಬಾಗಿಲನ್ನು ಕೋಪದಿಂದ ಮುಚ್ಚಿ  ಅನುಚಿತವಾಗಿ ವರ್ತಿಸಿರುವ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ.
15 ದಿನಗಳ ಹಿಂದೆ ಕೂಡಾ ಬ್ಯಾಂಕಿಗೆ ತೆರಳಿ ಎಟಿಎಂ ಕಾರ್ಡ್ ಹಾಗೂ ಚೆಕ್ ಬುಕ್ ನೀಡಿ ಎಂದು ಕೇಳಿದಾಗ ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಹೇಳಿ ಹಿಂದಕ್ಕೆ ಕಳಿಸಿರುತ್ತಾರೆ. ಅದೂ ಅಲ್ಲದೆ ಬ್ಯಾಂಕ್ ವ್ಯವಹಾರದ ಸಮಯದಲ್ಲೇ ಆರ್ ಟಿ ಜಿ ಎಸ್  ನೆಫ್ಟ್ ಮಾಡಲು ಬಂದ ನನಗೆ ಮಾತ್ರವಲ್ಲದೆ ಇತರ ಹಲವರಿಗೆ ಕೂಡಾ ಹಿಂದೆ ಕಳಿಸಿ `ನಾಳೆ ಬನ್ನಿ’ ಎಂದು ಹೇಳಿ ವಿನಾಕಾರಣ ಕಿರುಕುಳ ನೀಡಿದ್ದಾರೆ.
ನನ್ನ ಗ್ಯಾಸ್ ಸಬ್ಸಿಡಿ, ಹಾಲಿನ ಬೆಂಬಲ ಬೆಲೆ, ತೋಟಗಾರಿಕಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಇತ್ಯಾದಿಗಳನ್ನು ತಮ್ಮ ಬ್ಯಾಂಕಿನಲ್ಲಿರುವ ಖಾತೆಗೆ ಲಿಂಕ್ ಮಾಡಿದ್ದು ಹಾಗೂ ತಮ್ಮ ಬ್ಯಾಂಕಿನಲ್ಲಿ ಸುಮಾರು 100 ಜನರ ಖಾತೆಗಳನ್ನು ತೆರೆಯಲು ಶ್ರಮಿಸಿರುತ್ತೇನೆ. ಹಾಲು ಉತ್ಪಾದಕರ ಸಂಘ, ರೈತ ಸಂಘ ಸೇರಿದಂತೆ ಹಲವು ಬ್ಯಾಂಕ್ ಖಾತೆಗಳನ್ನು ತಮ್ಮಲ್ಲಿ ತೆರೆದಿದ್ದು  ಹಲವು ವರ್ಷಗಳಿಮದ ವ್ಯವಹರಿಸುತ್ತಿದ್ದೇನೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕಾದ ಬ್ಯಾಂಕ್ ಸಿಬ್ಬಂದಿಗೆ ಗ್ರಾಹಕರನ್ನು ಕಂಡಾಗ ಕೋಪ ಬಂದಂತೆ ವರ್ತಿಸುತ್ತಿದ್ದು  ತಮ್ಮ ಖಾತೆದಾರರ ಮನಸ್ಸಿಗೆ ತೀವ್ರ ನೋವುಂಟು ಮಾಡುವಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಿಬ್ಬಂಧಿಗಳ ಬಗ್ಗೆ ತಾವು ಕೂಲಂಕೂಶವಾಗಿ ಪರಿಶೀಲಿಸಿ ತನಿಖೆ ನಡೆಸಿ ಮೂಡುಬಿದಿರೆ ಬ್ರಾಂಚಿನಲ್ಲಿ ಖಾತೆದಾರರಿಗೆ ನ್ಯಾಯಯುತವಾದ ಸೇವೆ ಮತ್ತು ಗೌರವಯುತವಾಗಿ ವ್ಯವಹರಿಸಲು ಸಾಧ್ಯವಾಗುವಂತೆ ಉತ್ತಮ ಸಿಬ್ಬಂಧಿಗಳನ್ನು ನಿಯೋಜಿಸಿ ಎಲ್ಲಾ ನಾಗರಿಗರಿಗೆ ಅನುಕೂಲ ಒದಗಿಸಿಕೊಡುವಂತೆ ತಮ್ಮಲ್ಲಿ ಈ ಅರ್ಜಿಯ ಮೂಲಕ ವಿನಂತಿಸುತ್ತೇನೆ.

  • ಆಲ್ವಿನ್ ಎಸ್ ಮಿನೇಜಸ್, ಮೂಡಬಿದ್ರೆ