ನಾಳೆ ಹ್ಯಾಂಡ್ರೈಟಿಂಗ್ ವಿಝಾಡ್ರ್ಸ್ ಫೈನಲ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಶಾಲೆ ಮತ್ತು ಬಿಐಸಿ ಸೆಲ್ ಇಂಡಿಯಾದಲ್ಲಿ ದಿ ಹಿಂದು ಸಂಘಟಿಸಿದ್ದ ಹಸ್ತಾಕ್ಷರ ವಿಝಾಡ್ರ್ಸ್ 2017 ಸ್ಪರ್ಧೆಯ ಫೈನಲ್ ಪೈಪೋಟಿ ಎಪ್ರಿಲ್ 9ರಂದು ಭಾನುವಾರ ನಗರದ ಜೆಪ್ಪುವಿನ ಕ್ಯಾಸ್ಸಿಕಾ ಹೈಸ್ಕೂಲು ಎದುರುಗಡೆಯಿರುವ ದಿ ಹಿಂದು ಪತ್ರಿಕೆ ಕಚೇರಿಯಲ್ಲಿ ನಡೆಯಲಿದೆ. ಸ್ಪರ್ಧೆಗೆ ದಾಖಲಾತಿಯು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದ್ದು ಸ್ಪರ್ಧೆಯು 10 ಗಂಟೆಗೆ ಪ್ರಾರಂಭವಾಗಲಿದೆ.

ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಜೂನಿಯರ್ ವಿಭಾಗವು 4 ರಿಂದ 6ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಮತ್ತು ಸೀನಿಯರ್ ವಿಭಾಗವು 7ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. 22 ಶಾಲೆಗಳಿಂದ ಸುಮಾರು 6000 ವಿದ್ಯಾರ್ಥಿಗಳು ಶಾಲಾ ಸುತ್ತಿನಲ್ಲಿ ಸ್ಪರ್ಧಿಸಿದ್ದರು ಮತ್ತು ಅಂತಿಮ ಸುತ್ತಿಗೆ 100 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರತಿ ವಿಭಾಗದ ಮೂವರು ವಿಜೇತರಿಗೆ ಬಹುಮಾನ ಲಭಿಸುತ್ತದೆ. ಹೆಚ್ಚಿನ ವಿವರಗಳಿಗೆ 9980771213/9448279124 ಅಥವಾ ಕಚೇರಿಯ 2417575 ನಂಬರನ್ನು ಸಂಪರ್ಕಿಸಬಹುದು.