ಹಳಿಯಾಳ ಬಂದ್ : ಉತ್ತಮ ಪ್ರತಿಕ್ರಿಯೆ

ನಮ್ಮ ಪ್ರತಿನಿಧಿ ವರದಿ

ಹಳಿಯಾಳ : ದಲಿತರ ನ್ಯಾಯಯುತವಾದ ಬೇಡಿಕೆಯಾದ ಡಾ ಬಾಬಾಸಾಹೇಬ ಅಂಬೇಡ್ಕರ ಭವನವನ್ನು ಮೌರ್ಯ ಹೋಟೇಲ್ ಪಕ್ಕದ ನಿವೇಶನದಲ್ಲಿ ನಿರ್ಮಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸರ್ಕಾರ ಸ್ಪಂದಿಸದೇ ಇರುವುದನ್ನು ವಿರೋಧಿಸಿ ದಲಿತ ಸಂಘಟನೆಗಳ ಒಕ್ಕೂಟದವರು ಬುಧವಾರ ಕರೆ ನೀಡಿದ ಹಳಿಯಾಳ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಯಿತು.