ಹಳೆಯಂಗಡಿ 30-40 ಜನ ದರೋಡೆಕೋರರಲ್ಲ

ಹಳೆಯಂಗಡಿಯಲ್ಲಿ ನಡೆದ ಕಳ್ಳತನ, ದರೋಡೆ ಪ್ರಕರಣಗಳ ಕೆಲವೊಂದು ಪತ್ರಿಕೆಯ ವರದಿಯು ಸ್ಥಳೀಯ ನಾಗರಿಕರ ಮೇಲೆಯೇ ಅಪರಾದ ಹೊರಿಸುವುದು ಹಾಸ್ಯಾಸ್ಪದವಾಗಿದೆ.
ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ಭಯಭೀತಗೊಂಡಿದ್ದ ನಾಗರಿಕರು ತಾವೇ ಸ್ವತಃ ಕಳ್ಳರ ಹುಡುಕಾಟದಲ್ಲಿ ತೊಡಗಿದ್ದಾರೆ.
ಕಳ್ಳರು ವಾಹನವನ್ನು ಉಪಯೋಗಿಸಿ ಪರಾರಿಯಾಗುತ್ತಿದ್ದರು ಎಂಬ ಶಂಕೆಯ ಮೇರೆಯಿಂದಲೇ ಎಲ್ಲ ವಾಹನಗಳ ಮೇಲೆ ಸ್ಥಳೀಯರು ನಿಗಾವಹಿಸುತ್ತಿದ್ದರು ಹೊರತು ದರೋಡೆ ಮಾಡುವ ಉದ್ದೇಶದಿಂದಲ್ಲ.
ಈ ವೇಳೆಗೆ ಅನುಮಾನಸ್ಪದವಾಗಿ ವೇಗವಾಗಿ ಬಂದ ಕಾರೊಂದನ್ನು ಕಂಡು ನಿಲ್ಲಿಸಲು ಸೂಚಿಸಿದರೇ ಹೊರತು ದರೋಡೆ ಮಾಡಲು ಅಲ್ಲ.
ಎಸ್ ಕೋಡಿಯಲ್ಲಿ ಓರ್ವ ಯಾರೋ ಮೊಬೈಲಿನಲ್ಲಿ ಮಾತಾನಾಡಿರುವುದಕ್ಕೂ ತೋಕುರಿನ ಬಳಿ ನಡೆದ ಘಟನೆಗೂ ಸಂಬಂಧವಿಲ್ಲ.
ಮತ್ತು ರಿಕ್ಷಾದಲ್ಲಿದ್ದವರು ಜನ ಸಂದಾಣೆಯನ್ನು ನೋಡುತ್ತಾ ನಿಧಾನವಾಗಿ ಚಲಿಸುತ್ತಿದ್ದರೇ ಹೊರತು ಬೇರೆ ಯಾವುದೇ ಕಾರಣದಿಂದಲ್ಲ.
ನಿಜವಾಗಿಯೂ ಇದು ಸ್ಥಳೀಯರು ಮತ್ತು ಕಾರು ಚಾಲಕನ ನಡುವೆ ಆದ ಸಣ್ಣ ತಪ್ಪು ಗ್ರಹಿಕೆಯೇ ಹೊರತು ಬೇರೇನೂ ಅಲ್ಲ.
ಇದೇ ಘಟನೇ ಈಗ ರೆಕ್ಕೆ ಪುಕ್ಕ ಕಟ್ಟಿಕೊಂಡು ಪತ್ರಿಕೆಯಲ್ಲಿ ಜನರೇ ದರೋಡೆಕೋರರಾಗಿ ಬಿಂಬಿತವಾಗಿರುವುದು ದುರದೃಷ್ಟಕರ.
ಕಳ್ಳರನ್ನು ಹಿಡಿಯಲು ಪೊಲೀಸರಿಗೆ ಸ್ಥಳೀಯರು ಸಹಾಯ ಮಾಡುತ್ತಿದ್ದರೇ ಹೊರತು, ಪೊಲೀಸರು ದರೋಡೆಕೋರರಿಗೆ ಬೆಂಬಲವಾಗಿ ನಿಂತಿರುವುದು ಶುದ್ಧ ಸುಳ್ಳು.
ಮುಲ್ಕಿ ಠಾಣಧಿಕಾರಿ ಹಾಗು ಇತರ ಸಿಬ್ಬಂಧಿಗಳು ಸೇರಿ ಜನರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ ಮಾತ್ರವಲ್ಲದೇ ಗಸ್ತು ಕೂಡಾ ಹೆಚ್ಚಿಸಿ ಜನರಿಂದ ಭೇಷ್ ಎನಿಸಿಕೊಂಡಿದ್ದಾರೆ

  • ಅದ್ದಿ ಬೊಳ್ಳೂರು